Wednesday, October 15, 2025

Latest Posts

ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಮನೆಗೆ ನಟ ದರ್ಶನ್ ಭೇಟಿ

- Advertisement -

ಧಾರವಾಡ : ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಭೇಟಿ ನೀಡಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ.

 ಧಾರವಾಡದಲ್ಲಿ ಇರುವ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ತೆರಳಿ ಪತ್ನಿ, ಅಕ್ಕ ಮತ್ತು ಮಕ್ಕಳಿಗೆ ಸಮಾಧಾನ ಹೇಳಿದ್ದಾರೆ. ಸುಮಾರು ವರ್ಷಗಳಿಂದ ವಿನಯ್ ಕುಲಕುರ್ಣಿ ಹಾಗೂ ದರ್ಶನ್ ಒಳ್ಳೆಯ ಗೆಳೆಯರು, ಕಳೆದ ಬಾರಿ ಧಾರವಾಡಕ್ಕೆ ಭೇಟಿ ನೀಡಿದ್ದಾಗ ವಿನಯ್ ಜೊತೆ ದಚ್ಚು ಎತ್ತಿನ ಗಾಡಿ ಏರಿ ಸಂಭ್ರಮಿಸಿದ್ದರು.

ಸದ್ಯ ಜಿಲ್ಲಾ ಪಂಚಾಯತ್ತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದಾರೆ.

- Advertisement -

Latest Posts

Don't Miss