Sandalwood: ನಟಿ ಅರ್ಚನಾ ಕೊಟ್ಟಿಗೆಯವರನ್ನು ಈ ಬಾರಿ ಬಿಗ್‌ಬಾಸ್‌ಗೆ ಕರೆಸಿ: ಅಭಿಮಾನಿಗಳ ಡಿಮ್ಯಾಂಡ್

Bigg Boss: ಅಯ್ಯನಮನೆ, ಎಲ್ಲರ ಕಾಲೆಳೆಯತ್ತೆ ಕಾಲ, ವಾಸು ನಾ ಪಕ್ಕಾ ಕಮರ್ಷಿಯಲ್ ಸೇರಿ ಹಲವು ಸಿನಿಮಾಗಳಲ್ಲಿ ನಟಿ ಅರ್ಚನಾ ಕೊಟ್ಟಿಗೆ, ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಇದೀಗ ಅವರ ಮಾತಿಗೆ ಫಿದಾ ಆಗಿರುವ ಜನ, ಆಕೆ ಈ ಬಾರಿಯ ಬಿಗ್‌ಬಾಸ್‌ಗೆ ಬರಲಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

ಕೀರ್ತಿ ನಾರಾಯಣ್ ನಡೆಸುವ ಕೀರ್ತಿ ಇಎನ್‌ಟಿ ಕ್ಲಿನಿಕ್‌ಗೆ ಸಂದರ್ಶನಕ್ಕಾಗಿ ಬಂದಿದ್ದರು. ಇವರಿಗೆ ನಟಿಯರಾದ ಖುಷಿ ರವಿ ಮತ್ತು ಅಮೃತಾ ಕೂಡ ಸಾಥ್ ನೀಡಿದ್ದರು. ಈ ವೇಳೆ ಅರ್ಚನಾ ಮಾತನಾಡಿದ ರೀತಿ, ನಾರ್ಮಲ್ ಆಗಿರುವ ರೀತಿ ನೋಡಿ, ಜನ ಅವರನ್ನು ಸಿಕ್ಕಾಪಟ್ಟೆ ಇಷ್ಟಪಟ್ಟರು. ಹಾಗಾಗಿ ಅದೇ ಚಾನೆಲ್‌ನಲ್ಲಿ ಅರ್ಚನಾ ಅಭಿಮಾನಿಗಳಿಗೆ ಮಾತ್ರ ಅನ್ನೋ ಕ್ಲಿಪ್ ಕೂಡ ಹಾಕಲಾಗಿತ್ತು. ಆ ರೇಂಜಿಗೆ ಅರ್ಚನಾ ಹವಾ ಇತ್ತು.

ಇದೀಗ ಅರ್ಚನಾ ಅವರು ರಿಯಲ್ ಲೈಫ್‌ನಲ್ಲಿ ಹೇಗಿರ್ತಾರೆ ಅಂತಾ ನಮಗೂ ನೋಡ್ಬೇಕು, ಅವರನ್ನು ಈ ಬಾರಿಯ ಬಿಗ್‌ಬಾಸ್‌ಗೆ ಕರೆಸಿ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡವನ್ನು ಟ್ಯಾಗ್ ಮಾಡಿ, ವಿನಂತಿಸಿದ್ದಾರೆ. ಕಲರ್ಸ್ ಕನ್ನಡ ಅಭಿಮಾನಿಗಳ ಮಾತಿಗೆ ಓಕೆ ಎಂದು ಹೇಳಿ, ಅರ್ಚನಾ ಅವರನ್ನ ಕರೆಸುತ್ತಾರಾ ಅಂತಾ ಕಾದು ನೋಡಬೇಕಿದೆ.

About The Author