ನಟ ಮತ್ತು ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಧ್ರುವಂತ್, ಇಂದು ಸೋಶಿಯಲ್ ಮೀಡಿಯಾದಲ್ಲಿ ಬ್ಯಾಡ್ ಟ್ರೋಲ್ ಮಾಡುವವರ ವಿರುದ್ಧ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ ಮದುವೆ ಬಗ್ಗೆ ತಮಗೆ ಯಾವುದೇ ಇಂಟ್ರೆಸ್ಟ್ ಇಲ್ಲ. ಎಲ್ಲ ಕಡೆಯೂ ಮೋಸವಾಗುತ್ತಿದೆ ಎಂಬ ರೀತಿ ಹೇಳಿಕೆ ನೀಡಿದ್ದರು. ಅಲ್ಲದೇ, ಕೆಲವು ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಹೆಸರಲ್ಲಿ ಚಪ್ಪರ್ಗಳನ್ನು ಪ್ರೋತ್ಸಾಹಿಸುತ್ತಿದ್ದಾರೆಂದು ಆರೋಪಿಸಿದ್ದರು. ಹೀಗಾಗಿ ಧ್ರುವಂತ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು.
ಆದರೀಗ ಧ್ರುವಂತ ಹಾಗೆ ಟ್ರೋಲ್ ಮಾಡುವವರ ವಿರುದ್ಧ ಪೋಲೀಸ್ ಸ್ಟೇಶನ್ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾತನಾಡಿರುವ ಅವರು, ಸೋಶಿಯಲ್ ಮೀಡಿಯಾ ತಮ್ಮ ಟ್ಯಾಲೆಂಟ್ ತೋರಿಸಲು 1 ಅತ್ಯುತ್ತಮ ವೇದಿಕೆಯಾಗಿದೆ. ಆಧ್ಯಾತ್ಮ, ಪ್ರಕೃತಿ, ಸಂಗೀತ, ನೃತ್ಯ ಹೀಗೆ ತಮ್ಮ ಟ್ಯಾಲೆಂಟ್ ತೋರಿಸಲು ಸೋಶಿಯಲ್ ಮೀಡಿಯಾ ಉತ್ತಮ ವೇದಿಕೆಯಾಗಿದೆ.
ಆದರೆ ಅದರ ಮಧ್ಯದಲ್ಲಿ ಬೇರೆಯದ್ದೇ ವರ್ಗ ಹುಟ್ಟಿದೆ. ಇವರೆಲ್ಲ ಓವರ್ ನೈಟ್ ಫೇಮಸ್ ಆಗಬೇಕು. ಲೈಕ್ಸ್, ಕಾಮೆಂಟ್ಸ್ ಬರಬೇಕು. ಅದರಿಂದ ನಾವು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬೇಕು ಎಂದು ನೀಚ ಕೃತ್ಯಕ್ಕೆ ಇಳಿದಿದ್ದಾರೆ.
ಅದೇನೆಂದರೆ, ಹಲವಾರು ವರ್ಷಗಳಿಂದ ಹಲವು ಕ್ಷೇತ್ರಗಳಲ್ಲಿ ಕಷ್ಟಪಟ್ಟು ದುಡಿದು ಹೆಸರು ಗಳಿಸಿದವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಇಲ್ಲಸಲ್ಲದ ವಿಷಯಗಳನ್ನು ಹರಡಿಸಿ, ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಬರೀ ಲೈಕ್ಸ್, ಕಾಮೆಂಟ್ಸ್ಗಾಗಿ ವ್ಯಕ್ತಿಯ ಬಗ್ಗೆ ಪರ್ಸನಲ್ ಅಟ್ಯಾಕ್ ಮಾಡೋದು, ಫ್ಯಾಮಿಲಿ ಬಗ್ಗೆ ಮಾತಾಡೋದು, ತೀರಿಹೋದರು ಎಂದು ಸುಳ್ಳು ಸುದ್ದಿ ಹಬ್ಬಿಸೋದು ಇಂಥ ಕೆಲಸವನ್ನೆಲ್ಲ ಮಾಡುತ್ತಿದ್ದಾರೆ.
ಹೀಗೆಲ್ಲ ಮಾಡುವವರು ಕೆಲವರಾದರೆ, ಇನ್ನು ಕೆಲವರು ಅವರ ಟ್ರೋಲ್ಗಳನ್ನು ಬೆಂಬಲಿಸಿ, ನೀನು ಮಾಡಿದ್ದು ಸೂಪರ್ ಎನ್ನುತ್ತಾರೆ. ಈ ರೀತಿಯಾಗಿ ವಿಕಾರ ವಿಕೃತಿ ಮೆರೆಯುತ್ತಿದ್ದಾರೆ. ಮುಂಚೆ ಇಂಥದ್ದೆಲ್ಲ ಕಡಿಮೆ ಇತ್ತು. ಆದರೆ ಈಗ ಟ್ರೋಲರ್ಸ್ ಸಂಖ್ಯೆ ಹೆಚ್ಚಾಗಿದೆ.
ಕೆಲವರು ಇಂಥವರನ್ನು ಕಡೆಗಣಿಸಿ, ಸುಮ್ಮನಿದ್ದಾರೆ. ಹಾಗಾಗಿ ಇಂಥವರು ಅತೀಯಾಗಿ ಆಡಲು ಶುರು ಮಾಡಿದ್ದಾರೆ. ಇಂಥವರ ಅಟ್ಟಹಾಸ ಮಟ್ಟಹಾಕದಿದ್ದರೆ, ಮುಂದೆ ಸಮಸ್ಯೆ ಖಚಿತ ಎಂದಿರುವ ಧ್ರುವಂತ್ ಸ್ಥಳೀಯ ಪೋಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದಾರೆ.




