ಲಕ್ಷ್ಮೀ ಮೇಲೆ ಆಸೆ ಪಟ್ಟ ನಾರದರಿಗೆ ವಿಷ್ಣು ಮಾಡಿದ್ದೇನು..? ಇದಕ್ಕೆ ನಾರದರು ನೀಡಿದ ಶಾಪವೇನು..?

ಬ್ರಹ್ಮಚಾರಿಯಾಗಿ ದೇವಲೋಕದಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ನಾರದರಿಗೆ ಒಮ್ಮೆ ಮದುವೆಯಾಗುವ ಆಸೆ ಚಿಗುರೊಡೆಯಿತು. ಇದಕ್ಕೆ ಕಾರಣವೇನು..? ನಾರದರು ಲಕ್ಷ್ಮೀಯ ಮೇಲೇಕೆ ಆಸೆ ಪಟ್ಟರು..? ಯಾವ ತಪ್ಪಿಗೆ ವಿಷ್ಣುವಿಗೆ ನಾರದರು ಶಾಪ ನೀಡಿದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ತಾನು ಬ್ರಹ್ಮಚಾರಿ ಎಂದು ಅಹಂನಿಂದ ಬೀಗುತ್ತಿದ್ದ ನಾರದರ ಅಹಂ ಬಿಡಿಸಲು, ಶ್ರೀವಿಷ್ಣು ಮಾಯಾ ಲೋಕವೊಂದನ್ನು ಸೃಷ್ಟಿಸಿ, ಅಲ್ಲಿ ಲಕ್ಷ್ಮೀ ದೇವಿಯನ್ನು ರಾಣಿಯಾಗಿ ಮಾಡಿ, ಆ ರಾಣಿಗೆ ಸ್ವಯಂವರ ರಚಿಸುವ ವ್ಯವಸ್ಥೆ ಮಾಡಿದನು. ಸ್ವಯಂವರ ಹೇಗಿರುತ್ತದೆ ಅಂತಾ ನೋಡಲು ಬಂದಿದ್ದ ನಾರದ ಮುನಿಗಳಿಗೆ ಲಕ್ಷ್ಮೀ ದೇವಿಯ ಮೇಲೆ ಆಸೆಯಾಯಿತು. ತಾನೂ ಕೂಡ ಹರಿಯಂತೆ ಸುಂದರಗೊಂಡು, ಈ ರಾಜಕುಮಾರಿಯನ್ನು ವರಿಸಬೇಕೆಂಬ ಆಸೆ ಹುಟ್ಟಿತು.

ಆಗ ಶ್ರೀವಿಷ್ಣುವಿನ ಬಳಿ ಹೋಗಿ, ನನಗೂ ಹರಿಯಂತೆ ಸುಂದರವಾಗುವಂತೆ ಮಾಡು ಎಂದು ನಾರದರು ಕೇಳುತ್ತಾರೆ. ಆಗ ವಿಷ್ಣು ಸರಿ ಎಂದು ಹೇಳಿ, ನಾರದರ ಮುಖ ವಾನರ ಮುಖದಂತೆ ಮಾಡುತ್ತಾನೆ. ಸ್ವಯಂವರಕ್ಕೆ ಹೋದ ನಾರದರನ್ನು ಕಂಡು ಲಕ್ಷ್ಮೀ ಸಮೇತಳಾಗಿ ಎಲ್ಲರೂ ಗಹ ಗಹಿಸಿ ನಗುತ್ತಾರೆ. ಕೊನೆಗೆ ಲಕ್ಷ್ಮೀ ವಿಷ್ಣುವಿಗೆ ಹಾರ ಹಾಕುತ್ತಾಳೆ.

 ನಾರದರು ಅವಮಾನಗೊಂಡು ಸ್ವಯಂವರದಿಂದ ಆಚೆ ಬಂದು ನೀರಿನಲ್ಲಿ ತಮ್ಮ ಪ್ರತಿಬಿಂಬ ಕಾಣುತ್ತಾರೆ. ಆಗ ಅವರಿಗೆ ವಿಷ್ಣು ಮಾಡಿದ ಕೆಲಸ ಗೊತ್ತಾಗುತ್ತದೆ. ಸ್ವಯಂವರದಲ್ಲಿ ತನಗೆ ಅವಮಾನ ಮಾಡಿದ್ದಕ್ಕಾಗಿ ಕೋಪಗೊಂಡ ನಾರದರು ವಿಷ್ಣುವಿನ ಬಳಿ ಹೋಗುತ್ತಾರೆ. ಮುಂದಿನ ದಿನಗಳಲ್ಲಿ ನಿನ್ನ ಪ್ರೀತಿ ನಿನಗೆ ಸಿಗಲು ನೀನು ವಾನರರ ಸಹಾಯ ಪಡೆಯುವಂತಾಗಲಿ, ನೀನೂ ಪತ್ನಿಯಿಂದ ದೂರವಾಗುವಂತಾಗಲಿ ಎಂದು ಶಾಪ ಹಾಕುತ್ತಾರೆ.

ಮುಂದೆ ತ್ರೇತಾಯುಗದಲ್ಲಿ ರಾಮನಾಗಿ ರೂಪ ಪಡೆದ ಮಹಾವಿಷ್ಣು, ಸೀತೆಯನ್ನು ಹುಡುಕಲು ಹನುಮನ ಮತ್ತು ವಾನರ ಸೇನೆಯ ಸಹಾಯ ಪಡೆಯುತ್ತಾನೆ. ಅಪಹರಣಗೊಂಡ ಸೀತೆಯ ಮೇಲೆ ಅನುಮಾನ ಪಟ್ಟು, ಗರ್ಭಿಣಿಯಾಗಿದ್ದ ಆಕೆಯನ್ನು ವನವಾಸಕ್ಕೆ ಕಳುಹಿಸುತ್ತಾನೆ. ತದನಂತರ ರಾಮ ಸೀತೆ ಎಂದಿಗೂ ಒಂದಾಗುವುದಿಲ್ಲ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

About The Author