- Advertisement -
Karnatakatv.net : ಮೊನ್ನೆ ನೆಡೆದ ಪ್ರತಾಪ್ ಸಾವನ್ನ ಕುರಿತು ಟ್ಯಾಕ್ಸಿ ಚಾಲಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರ ನಿಗ ವಹಿಸದೆ ಇದ್ದರೆ ಪ್ರತಾಪ್ ರೀತಿ ಇನ್ನು ಬಹಳಷ್ಟು ಟ್ಯಾಕ್ಸಿ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳತ್ತಾರೆ. ನಮಗೆ ಬಾಡಿಗೆಗಳು ಸರಿಯಾಗಿ ಆಗುತ್ತಿಲ್ಲಾ , ಹಾಗೆ ಓಲಾ, ಉಬರ್ ಕಂಪನಿಗಳು ಸಹ ಸರಿಯಾದ ರೀತಿಯಲ್ಲಿ ಸರ್ಕಾರ ನಿಗದಿ ಮಾಡಿದ ಹಣವನ್ನು ನಮಗೆ ಸರಿಯಾಗಿ ನಿಡುತ್ತಿಲ್ಲಾ. ನಮಗೂ ನಿಮ್ಮ ಹಾಗೆ ಮನೆ ಮಕ್ಕಳು ಇದ್ದಾರೆ, ದಯವಿಟ್ಟು ನಮ್ಮನ್ನು ತಲೆಯಲ್ಲಿ ಇಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಿ. ನಮ್ಮ ಪರಿಸ್ಥಿತಿ ಬದಲಾದರೆ ಟ್ಯಾಕ್ಸ್ ರೀತಿಯಲ್ಲಿ ಸರ್ಕಾರಕ್ಕೆ ನಾವೆ ಹಣ ಕೊಡುತ್ತೇವೆ. ಸಾರಿಗೆ ಸಚಿವರಿಗೆ ನಮ್ಮ ಬಗ್ಗೆ ಕಿಂಚಿತ್ತು ಕನಿಕರವಿಲ್ಲ. ಈ ಸರ್ಕಾರ ಇರುವ ವರೆಗು ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -

