www.karnatakatv.net:- ರಾಷ್ಟ್ರೀಯ- ಕಳೆದ ಕೆಲ ದಿನಗಳಿಂದ ಬೇರೆ, ಬೇರೆ ಕಾರಣಗಳಿಂದ ಸುದ್ದಿಯಲ್ಲಿರುವ ಟ್ವಿಟರ್ ಇಂದು ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ಸ್ಥಗಿತಗೊಂಡಿತ್ತು. ದೋಷ ಕಂಡುಬರುತ್ತಲೇ ತಕ್ಷಣ ಎಚ್ಚೆತ್ತುಕೊಂಡ ಟ್ವಿಟರ್ ಅದರತ್ತ ಗಮನಹರಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಇದೀಗ ದೋಷಗಳನ್ನ ಸರಿಪಡಿಸಿರುವುದಾಗಿ ತನ್ನ ಅಧಿಕೃತ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿರುವ ಟ್ವಿಟರ್, ವೆಬ್ ಮೂಲಕ ಟ್ವಿಟರ್ ಬಳಸುತ್ತಿದ್ದ ಬಳಕೆದಾರರಿಗೆ ಎದುರಾಗಿದ್ದ ಸಮಸ್ಯೆಗಳನ್ನು ಪತ್ತೆಹಚ್ಚಿ ಸರಿಮಾಡಿದ್ದೇವೆ ಎಂದು ತಿಳಿಸಿದೆ.




