www.karnatakatv.net:- ಸಿನಿಮಾ- ನಟಿ ಮಂದಿರಾಬೇಡಿ ಪತಿಯ ಸಾವಿನ ವೇಳೆ ತೆಗೆದುಕೊಂಡ ನಿರ್ಧಾರ, ಇದೀಗ ಎಲ್ಲರ ಚರ್ಚೆಗೆ ಗ್ರಾಸವಾಗಿದೆ. ಮಂದಿರಾಬೇಡಿ ಪತಿ ಚಲನಚಿತ್ರ ನಿರ್ದೇಶಕ ರಾಜ್ ಕೌಶಲ್ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಅವರ ಅಗಲಿಕೆ ಈ ಕುಟುಂಬಕ್ಕೆ ತೀರದ ಆಘಾತ ಉಂಟು ಮಾಡಿದೆ. ಇದೀಗ ಮಂದಿರಾ ಬೇಡಿ ಎಲ್ಲಾ ಸಂಪ್ರದಾಯಗಳನ್ನ ಮೀರಿ, ತಾವೇ ತಮ್ಮ ಪತಿಯ ಅಂತ್ಯಸಂಸ್ಕಾರವನ್ನ ನೆರವೇರಿಸಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಶವಸಂಸ್ಕಾರದ ವೇಳೆ ಬೆಂಕಿ ಇರುವ ಗಡಿಗೆಯನ್ನ ಪುರುಷರು ಕೊಂಡೊಯ್ಯುವುದು ಹಾಗೂ ಪುರುಷರೇ ಅಂತ್ಯಸಂಸ್ಕಾರ ನೆರವೇರಿಸುವುದು ನಿಯಮ, ಆದ್ರೆ, ನಟಿ ಮಂದಿರಾಬೇಡಿ ತಾವೇ ಬೆಂಕಿ ಇದ್ದ ಮಡಿಕೆ ಹೊತ್ತು ಶವದ ಮುಂದೆ ಸಾಗಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.




