ಮೂವರು ಮಕ್ಕಳಿಗೆ ಐಸ್ ಕ್ರೀಮ್‌ನಲ್ಲಿ ವಿಷ ಬೆರೆಸಿ ಕೊಟ್ಟ ತಂದೆ

www.karnatakatv.net: ರಾಷ್ಟ್ರೀಯ: ಮುಂಬಯಿ- ಇಲೊಬ್ಬ ತಂದೆ ತನ್ನ ಮೂವರು ಮಕ್ಕಳಿಗೆ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿ ಕೊಟ್ಟಿದ್ದಾನೆ. ಮುಂಬೈನ ಮನ್ ಖುರ್ದ್ ಪ್ರಾಂತ್ಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತಂದೆ ಮೊಹಮ್ಮದ್ ಅಲಿ ನೌಶಾದ್ ನೀಡಿದ ವಿಷದ ಐಸ್ ಕ್ರೀಮ್ ತಿಂದು ಒಬ್ಬ ಮಗು ಸಾವನ್ನಪ್ಪಿದ್ದು, ಇನ್ನಿಬ್ಬರು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. 5 ವರ್ಷದ ಅಲಿಷನ್ ಅಲಿ ಮೃತ ಮಗು, ಇನ್ನಿಬ್ಬರಾದ ಅಲಿನ(7) ಹಾಗೂ ಅರ್ಮಾನ್(2)ರಿಗೆ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ಜೂನ್.25ರಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದ. ಪತ್ನಿಯ ಮೇಲಿನ ಕೋಪಕ್ಕೆ ಈ ರೀತಿಯ ಕೃತ್ಯವೆಸಗಿದ್ದಾನೆ.

About The Author