ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮಕಥೆಯನ್ನು ಆಧರಿಸಿ ಸಿನಿಮಾ ಮಾಡ್ತೀನಿ ಅಂತ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್‌ಬಾಸ್ ಮನೆಯಲ್ಲಿ ಘೋಷಣೆ ಮಾಡಿದ್ದರು. ಚಿತ್ರದ ಟೈಟಲ್, ನಾಯಕ-ನಾಯಕಿ-ಸಂಗೀತ ನಿರ್ದೇಶಕ-ನಿರ್ಮಾಪಕ-ನಾಯಕಿ ಅಣ್ಣ-ತಮ್ಮ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಬಿಗ್‌ಹೌಸ್‌ನಲ್ಲಿ ಓಪನ್ನಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಮ್ಯೂಸಿಕ್ ಕಂಪೋಸಿಷನ್ ಜವಾಬ್ದಾರಿ ಹೊತ್ತಿರುವ ಬ್ರೋ ಶಮಂತ್ ಅವರು ಸೈಲೆಂಟಾಗಿ ಟೈಟಲ್ ಟ್ರ್ಯಾಕ್ ರೆಡಿಮಾಡಿಕೊಂಡಿದ್ದಾರೆ. ಶಮಂತ್ ಮ್ಯೂಸಿಕ್ ಕಂಪೋಸಿಷನ್‌ನಲ್ಲಿ ಟೈಟಲ್ ಸಾಂಗ್ ಹೇಗೆ ತಯ್ಯಾರಾಗಿದೆ ಅನ್ನೋದನ್ನ ಹೇಳುವ ಮೊದಲು ಅರ್ವಿ-ದಿವ್ಯಾ ಜೋಡಿ ಬಗ್ಗೆ ಹಾಗೂ ಲವ್‌ಸ್ಟೋರಿ ಬಗ್ಗೆ ಬಿಗ್‌ಹೌಸ್‌ನಲ್ಲಿ ಏನೆಲ್ಲಾ ಡಿಸ್ಕ್ಷನ್ ಆಗಿತ್ತು ಅನ್ನೋದನ್ನ ನೋಡ್‌ಬಿಡೋಣ
`ಅರ್ವಿಯಾ’ ಜೋಡಿ ನಡುವಿರುವುದು ಸ್ನೇಹಾನಾ-ಪ್ರೀತಿನಾ..?
ಅರವಿಂದ್-ದಿವ್ಯಾ ಬಿಗ್‌ಹೌಸ್‌ನ ಕ್ಯೂಟ್ ಜೋಡಿ ಅನ್ನೋದು ನಿಮ್ಮೆಲ್ಲರಿಗೂ ಗೊತ್ತೆಯಿದೆ. ಇವರಿಬ್ಬರ ನಡುವೆ ಒಂದೊಳ್ಳೆ ಬಾಂಡೇಜ್ ಇದೆ, ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ, ಇಬ್ಬರ ವೇವ್‌ಲೆಂಗ್ತ್ ಮ್ಯಾಚ್ ಆಗಿರುವುದಕ್ಕೋ ಏನೋ ದೊಡ್ಮನೆಯಲ್ಲಿ ಇವರಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಹೀಗಾಗಿ, ಇವರಿಬ್ಬರನ್ನ ಒಟ್ಟಿಗೆ ನೋಡೋದಕ್ಕೆ ಬಿಗ್‌ಬಾಸ್ ಪ್ರೇಕ್ಷಕರು ಬಯಸ್ತಾರೆ. ದೊಡ್ಮನೆಯಲ್ಲಿ ಒಟ್ಟಾಗಿರುವ ಈ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗ್ಬೇಕು ಎಂಬುದು ಎಷ್ಟೋ ಪ್ರೇಕ್ಷಕರ ಆಶಯ. ಆದರೆ, ಈವರೆಗೂ ಓಪನ್ನಾಗಿ ಈ ಜೋಡಿ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿಲ್ಲ ಆದರೆ ಎಲ್ಲರ ಕಣ್ಣುಕುಕ್ಕುವಂತೆ ಒಟ್ಟೊಟ್ಟಿಗೆ ಕಾಲಕಳೆಯುತ್ತಿದ್ದಾರೆ
ಬೆಳ್ಳಿತೆರೆಮೇಲೆ ದಿಬ್ಬಣ ಹೊರಡಲಿದೆಯಾ ಅರವಿಂದ್-ದಿವ್ಯಾ ಪ್ರೇಮಕಥೆ !
ದಿವ್ಯಾ ಹಾಗೂ ಅರವಿಂದ್ ಸ್ನೇಹವನ್ನು ಹಾಗೂ ಪ್ರೀತಿಯನ್ನ ಅರ್ಥಮಾಡಿಕೊಂಡಿರುವ ಬಿಗ್‌ಬಾಸ್ ಸ್ಪರ್ಧಿಯಾದ ಚಕ್ರವರ್ತಿ ಚಂದ್ರಚೂಡ್ ಅವರು ಈ ಕ್ಯೂಟ್‌ಜೋಡಿಯ ಲವ್‌ಸ್ಟೋರಿಗೆ ಸಿನಿಮಾ ಟಚ್ ಕೊಡ್ಬೇಕು, ಬೆಳ್ಳಿತೆರೆಮೇಲೆ ಇವರಿಬ್ಬರ ಪ್ರೇಮಗಾಥೆ ಮೆರವಣಿಗೆ ಹೊರಡಬೇಕು ಅಂತ ನಿರ್ಧರಿಸಿದ್ದಾರೆ. ಈಗಾಗಲೇ ಬಿಗ್‌ಅಂಗಳದಲ್ಲಿ ನಿಂತು ಎಲ್ಲರ ಮುಂದೆ ಅರವಿಂದ್-ದಿವ್ಯಾ ಪ್ರೇಮಕಥೆಯನ್ನು ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಫ್ಯಾನ್ಸ್ ಇವರಿಬ್ಬರನ್ನು ಪ್ರೀತಿಯಿಂದ `ಅರ್ವಿಯಾ’ ಅಂತ ಕರೆಯುತ್ತಾರೆ ಹೀಗಾಗಿಯೇ ಅದೇ ಹೆಸರನ್ನ ಸಿನಿಮಾ ಟೈಟಲ್ ಆಗಿಸುತ್ತೇನೆ ಎಂದಿದ್ದಾರೆ.
`ಅರ್ವಿಯಾ’ ಪ್ರೇಮಕಥೆಗೆ ಚಕ್ರವರ್ತಿ ಆಕ್ಷನ್‌ಕಟ್ !
ಅರ್ವಿಯಾ ಚಿತ್ರಕ್ಕೆ ಚಕ್ರವರ್ತಿಯವರೇ ಆಕ್ಷನ್ ಕಟ್ ಹೇಳುತ್ತಾರಂತೆ. ಅರವಿಂದ್ ಹಾಗೂ ದಿವ್ಯಾ ಅವರೇ ಚಿತ್ರದ ನಾಯಕ-ನಾಯಕಿಯಾಗ್ಬೇಕು ಎನ್ನುವ ಚಕ್ರವರ್ತಿ, ಅಣ್ಣಾವ್ರ ನಾ ನಿನ್ನ ಮರೆಯಲಾರೆ' ಸಿನಿಮಾದಂತೆ
ಅರ್ವಿಯಾ’ ಚಿತ್ರ ತೆಗಿಬೇಕು ಅಂತ ಕನಸು ಕಂಡಿದ್ದಾರೆ. ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಅವಕಾಶ ಶಮಂತ್ ಅವರಿಗೆ ನೀಡ್ತೇನೆ. ಈ ಚಿತ್ರಕ್ಕೆ ಪ್ರಶಾಂತ್ ಸಂಬರ್ಗಿಯವರು ನಿರ್ಮಾಪಕರಾಗುತ್ತಾರೆ ಅಂತ ಹೇಳಿಕೊಂಡಿದ್ದಾರೆ. ಹೀರೋಯಿನ್ ತಮ್ಮನ ಪಾತ್ರಕ್ಕೆ ಶಮಂತ್ ಬೇಡಿಕೆಯಿಟ್ಟರೆ, ಅಣ್ಣನ ಪಾತ್ರಕ್ಕೆ ಪ್ರಶಾಂತ್ ಸಂಬರ್ಗಿ ಅಪ್ಲಿಕೇಷನ್ ಹಾಕಿದ್ದಾರೆ. ಓಪನ್ನಿಂಗ್‌ನಲ್ಲಿ ಡಕಾರ್ ರೇಸ್, ಸಿನಿಮಾದಲ್ಲಿ ರಿಯಲ್ ಸ್ಟಂಟ್ಸ್, ಇಡುತ್ತೇನೆ. ಒಳ್ಳೆಯ ಕಥೆ ಮಾಡ್ತೀನಿ ಅರವಿಂದ್ ಹಾಗೂ ದಿವ್ಯಾ ಇಬ್ಬರು ರೆಡಿಯಾಗ್ಬೇಕು ಎಂದಿದ್ದಾರೆ.
ಶಮಂತ್ ಗೀಚಿದ `ಅರ್ವಿಯಾ’ ಟೈಟಲ್ ಟ್ರ್ಯಾಕ್ ಹೀಗಿದೆ !
ಅಷ್ಟಕ್ಕೂ, ಅರ್ವಿ-ದಿವ್ಯಾ ಪ್ರೀತಿ ಬೆಳ್ಳಿಪರದೆಯ ಮೇಲೆ ದಿಬ್ಬಣ ಹೊರಡುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಶಮಂತ್ ಮಾತ್ರ ಅರ್ವಿಯಾ' ಟೈಟಲ್ ಟ್ರ್ಯಾಕ್ ಸೈಲೆಂಟಾಗಿ ಕಂಪೋಸ್ ಮಾಡಿ ಕ್ಯೂಟ್ ಕಪಲ್ಸ್ ಗೆ ಅಂಡ್ ಬಿಗ್‌ಬಾಸ್‌ಗೆ ಒಪ್ಪಿಸಿದ್ದಾರೆ.
ಅರ್ವಿಯಾ’ಗೋಸ್ಕರ ಶಮಂತ್ ರಚಿಸಿರುವ ಟೈಟಲ್ ಟ್ರ್ಯಾಕ್ ಹೇಗಿದೆ ನೀವು ಒಮ್ಮೆ ನೋಡಿಬಿಡಿ.
ಸಂಪಿಗೆ ಮರದಲ್ಲಿ ಒಂದು ಗಿಣಿಯೂ ನೋಡುತ್ತಿತ್ತು
ಆ ಬಾನಿನತ್ತ ಹಾರಲು
ಹಾರುತ ಹಾರುತ ಇನ್ನೊಂದು ಗಿಣಿಯ ಕಂಡು ನಿನ್ನ ಹೆಸರೇನು ಎಂದು ಕೇಳಿತು
ನೋಡುತ ನೋಡುತ ಕಣ್ ರೆಪ್ಪೆಮುಚ್ಚದಂತೆ
ಒಟ್ಟಿಗೆ ಇದ್ದವು ಬೇರೆ ಬೇರೆಯಾಗದಂತೆ
ಗೂಡಲ್ಲಿ ಒಂದಾಗಿ ಜೊತೆಜೊತೆಯಾಗಿ ಹಾಡಿತು
ಅರ್ವಿಯಾ…ಅರ್ವಿಯಾ ಜೊತೆಗೆ ಜೊತೆಗೆ ನೀ ಇರುವೆಯಾ
ಅರ್ವಿಯಾ..ಅರ್ವಿಯಾ ಎಂದೆಂದಿಗೂ ನೀ ಇರುವೆಯಾ
ಇದು ಶಮಂತ್ ಅರ್ವಿಯಾ'ಗೋಸ್ಕರ ಡೆಡಿಕೇಟ್ ಮಾಡಿರುವ ಟೈಟಲ್ ಟ್ರ್ಯಾಕ್. ದಿವ್ಯ ಹಾಗೂ ಶಮಂತ್ ನಡುವೆ ಒಂದು ಸ್ಪರ್ಧೆ ಇತ್ತು. ಆ ಸ್ಪರ್ಧೆಯಲ್ಲಿ ನೀನು ವಿನ್ ಆದರೆ ಒಂದು ಸಾಂಗ್ ಮಾಡಿಕೊಡ್ತೀನಿ ಅಂತ ಶಮಂತ್ ಚಾಲೆಂಜ್ ಮಾಡಿದ್ದರು. ಅದರಂತೇ, ದಿವ್ಯಾಗೆ ಶಮಂತ್ ಒಂದು ಲವ್‌ಟ್ರ್ಯಾಕ್ ನ ಕಂಪೋಸ್ ಮಾಡಿಕೊಟ್ಟಿದ್ದಾರೆ ಆ ಲವ್ ಟ್ರ್ಯಾಕ್ ನಲ್ಲಿ ಅರವಿಂದ್ ಅವರನ್ನು ಎಳೆದುತಂದಿದ್ದಾರೆ. ಇದು
ಅರ್ವಿಯಾ’ ಚಿತ್ರದ ಟೈಟಲ್ ಟ್ರ್ಯಾಕ್ ಅಂತ ಬಿಗ್‌ಬಾಸ್ ಮುಂದೆ ನಿಂತು ಶಮಂತ್ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಇದು ಚಕ್ರವರ್ತಿಯವರ ಅರ್ವಿಯಾ' ಚಿತ್ರದ ಟೈಟಲ್ ಟ್ರ್ಯಾಕ್ ಆಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ
ಅರ್ವಿಯಾ’ ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ. ಇನ್ನೇನಿದ್ದರೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರು ಮನಸ್ಸು ಮಾಡ್ಬೇಕು. ತಮ್ಮ ಲವ್‌ಸ್ಟೋರಿ ಬಿಗ್‌ಸ್ಕ್ರೀನ್‌ನಲ್ಲಿ ಮೆರೆಯೋದಕ್ಕೆ ದಿವ್ಯಾ-ಅರವಿಂದ್ ಒಪ್ಪಿಗೆ ಸೂಚಿಸಬೇಕು. ಎನಿವೇ, ಸದ್ಯಕ್ಕೆ ಈ ಜೋಡಿ ದೊಡ್ಮನೆಯಲ್ಲಿದ್ದಾರೆ, ಫೈನಲ್ಸ್ ತಲುಪಿ ಬಿಗ್‌ಕಿರೀಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ. ಅವರಿಗೆ ಬಿಗ್‌ಬಾಸ್ ಪಟ್ಟ ಹಾಗೂ ಕಿರೀಟ ಸಿಗುತ್ತಾ ವೇಯ್ಟ್ ಅಂಡ್ ಸೀ..
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಕರ್ನಾಟಕ ನ್ಯೂಸ್