ಲಂಕಾ ತಂಡದ ಬ್ಯಾಟಿಂಗ್ ಕೋಚ್ ಗೆ ಕೊರೊನಾ ಸೋಂಕು

www.karnatakatv.net ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಗೆ ಕೇವಲ ಒಂದು ವಾರ ಇರುವಾಗಲೇ ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಕೊರೊನಾಗೆ ತುತ್ತಾಗಿರುವುದು ಆತಂಕದ ಸಂಗತಿ. ಜುಲೈ 13ರಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಏಕದಿನ ಸರಣಿ ಆರಂಭವಾಗಲಿದ್ದು ಇದೀಗ ಲಂಕಾ ಪಾಳಯದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಮಾದರಿ ಪಾಸಿಟಿವ್ ಬಂದಿದೆ. ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಗ್ರಾಂಟ್ ಫ್ಲವರ್ ಅವರನ್ನು ಉಳಿದ ಆಟಗಾರರಿಂದ ಬೇರ್ಪಡಿಸಲಾಗಿದೆ. ಇಂಗ್ಲೆಂಡಿನಿಂದ ಹಿಂತಿರುಗುತ್ತಿದ್ದಂತೆ ಎಲ್ಲಾ ಆಟಗಾರರು ಕಟ್ಟುನಿಟ್ಟಿನ ಸಂಪರ್ಕ ಕಡಿತಗೊಳಿಸಲಿದ್ದಾರೆ.

About The Author