- Advertisement -
www.karnatakatv.net ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದಕ್ಕೆ ನನ್ನನ್ನೇ ಭ್ರಷ್ಟ ಎನ್ನುತ್ತಿದ್ದಾರೆ. ಬರೀ ಎಲ್ಲರ ಫೋನ್ ಟ್ಯಾಪಿಂಗ್ ಮಾಡುವುದೇ ನಿಮ್ಮ ಅಜೆಂಡೆನಾ? ಇವಾಗ ಯಾಕೆ ಅಂಬರೀಶ್ ಹೆಸರು ತೆಗೆದುಕೊಳ್ಳುತ್ತೀರಿ. ಅವರು ಇದ್ದಾಗಲೇ ಇದೆಲ್ಲಾ ಕೇಳಬಹುದಿತ್ತಲ್ಲಾ? ಅವರ ಹೆಸರು ಹೇಳೋಕು ಕುಮಾರಸ್ವಾಮಿಗೆ ಯೋಗ್ಯತೆ ಇಲ್ಲ ಎಂದು ಹೆಚ್ಡಿಕೆ ವಿರುದ್ಧ ಗುಡುಗಿದ್ದಾರೆ. ಇವರು ಸಿಎಂ ಆಗಿದ್ದಾಗ ಅಂಬಿ ಸ್ಮಾರಕಕ್ಕೆ ತಗಾದೆ ತೆಗೆದಿದ್ರು, ನಾನ್ಯಾಕ್ರೀ ಸ್ಮಾರಕ ನಿರ್ಮಾಣ ಮಾಡಿಸ್ಬೇಕು ಎಂದಿದ್ರು. ಅಂದು ದೊಡ್ಡಣ್ಣ ನನ್ನ ಬಳಿ ಕಣ್ಣೀರು ಹಾಕಿದ್ರು. ಇವಾಗ ಅವರ ಹೆಸರು ಹೇಳಿ ರಾಜಕೀಯ ಮಾಡ್ತಿದ್ದಾರೆ ಎಂದು ಸುಮಲತಾ ಗುಡುಗಿದ್ರು.
- Advertisement -

