ಒಂದಷ್ಟು ಜನ ಗೂಂಡಾಗಳನ್ನು ಅಲ್ಲಿ ಬಿಟ್ಟಿದ್ರು – ಸುಮಲತಾ

www.karnatakatv.net ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ವಾಕ್ಸಮರ ತಾರಕಕ್ಕೇರಿದ್ದು ಈ ಬಗ್ಗೆ ಸುಮಲತಾ ಪ್ರತಿಕ್ರಿಯಿಸಿದರು. ನಾನು ಅಲ್ಲಿ ಹೋಗಿದ್ದು ಕೇವಲ ವಸೂಲಿ ಮಾಡಲಿಕ್ಕೆ. ಸರ್ಕಾರಕ್ಕೆ ಬರಬೇಕಾದ ಹಣ ವಾಪಾಸ್ ತರಲಿಕ್ಕೆ. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಅಲ್ವಾ? ನಾನು ಒಂದು ಹೆಣ್ಣು ಅನ್ನೋದನ್ನ ಮರೆತು ನಾನು ಹೋದ ಜಾಗಕ್ಕೆ ಗೂಂಡಾಗಳನ್ನ ಕಳಿಸಿ ಬೆದೆರಿಸಿದ್ದೀರಿ. ನಮಗೆ ಅಲ್ಲಿ ಪ್ರಾಣ ಭಯ ಕಾಡಿತ್ತು. ಹೆಣ್ಣು ಮಕ್ಕಳ ವಿಚಾರದಲ್ಲಿ ಸಭ್ಯತೆಯಿಂದ ವರ್ತಿಸಿ. ನಿಮ್ಮ ಪದಗಳ ಬಳಕೆ ಹಿಡಿತದಲ್ಲಿರಲಿ. ತಪ್ಪನ್ನ ತಿದ್ದಿಕೊಳ್ಳುವುದು ಮನುಷ್ಯರ ಗುಣ. ನಿಮಗೆ ಮನುಷ್ಯತ್ವ ಗುಣವೇ ಇಲ್ಲ ಎಂದು ಸಂಸದೆ ಕುಮಾರಸ್ವಾಮಿ ವಿರುದ್ಧ ಛಾಟಿ ಬೀಸಿದ್ದಾರೆ.

About The Author