ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ಏನಂತಾರೆ ಕನ್ನಟದ ಸ್ಟಾರ್ಸ್ ಗಳು

www.karnatakatv.net ಬೆಂಗಳೂರು: ಕೊರೊನಾ ಮಹಾಮಾರಿಯ ಅವಾಂತರಗಳು ಒಂದೆರಡಲ್ಲ. ಸಿನಿಮಾ ರಂಗಕ್ಕೆ ಅದರ ಬಿಸಿ ಎಷ್ಟರ ಮಟ್ಟಿಗೆ ತಾಗಿದೆ ಎಂದರೆ ಬಹು ಕೋಟಿ ವೆಚ್ಚದ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಗಣೇಶ್, ದಿಗಂತ್ ಸಿನಿಮಾಗಳು ತೆರೆಗೆ ಬರಲು ರೆಡಿಯಾಗಿವೆ. ಇತ್ತ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ಕೆಜಿಎಫ್2 ಥಿಯೇಟರ್ ಗಳು ಓಪನ್ ಆಗ್ಲಿ ಅಂತ ಕಾಯ್ತಾ ಇದೆ. ಕಿಚ್ಚನ ವಿಕ್ರಾಂತ್ ರೋಣ, ಕೋಟಿಗೊಬ್ಬ3 ಶೂಟಿಂಗ್ ಮುಗಿಸಿ ರಿಲೀಸ್ ಗೆ ಕಾಯ್ತಾ ಇವೆ. ಆದರೆ ಕೊರೊನಾ ಅಬ್ಬರ ನಿಲ್ಲುವ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಆಗಲೇ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ಚಿತ್ರಮಂದಿರಗಳಿಗೆ ಅವಕಾಶ ಸಿಗಲಿ, ನೆಚ್ಚಿನ ನಟರ ಚಿತ್ರಗಳನ್ನ ನೋಡುವಂತಗಲಿ ಎಂದು ಚಿತ್ರ ಪ್ರೇಮಿಗಳು ಕಾಯ್ತಾ ಇದಾರೆ.

About The Author