Sandalwood: ನಟಿ, ಬಿಗ್‌ಬಾಸ್ ಖ್ಯಾತಿಯ ಶುಭಪೂಂಜಾ ಮದುವೆಯಾಗಿ ನಾಲ್ಕೇ ವರ್ಷಕ್ಕೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಅಂದ್ರೆ, 2022ರ ಜನವರಿಯಲ್ಲಿ ಶುಭ ಪೂಂಜಾ ಉದ್ಯಮಿ ಸುಮಂತ್ ಬಿಲ್ಲವ ಅವರ ಜತೆ ವಿವಾಹವಾಗಿದ್ದರು. ಅದಕ್ಕೂ ಮುನ್ನ ಬಿಗ್‌ಬಾಸ್ ಕನ್ನಡ ಸ್ಪರ್ಧಿಯಾಗಿದ್ದ ಶುಭಪೂಂಜಾ, ಕಾರ್ಯಕ್ರಮದಲ್ಲೂ ತಾವು ಮದುವೆಯಾಗುವ ಹುಡುಗನನ್ನು ಪರಿಚಯಿಸಿ, ಅವನನ್ನು ನಾನು ಪ್ರೀತಿಯಿಂದ ಚಿನ್ನಿಬಾಂಬ್ ಎಂದು ಕರೆಯುತ್ತೇನೆ ಎಂದು ಹೇಳಿದ್ದರು.
ಹೀಗಾಗಿ ಚಿನ್ನಿಬಾಂಬ್ ಎಂಬ ನಿಕ್‌ನೇಮ್ ಸಖತ್ ಫೇಮಸ್ ಆಗಿತ್ತು. ಅಲ್ಲದೇ ಜನ ಶುಭಪೂಂಜಾ ಮತ್ತು ಸುಮಂತ್ ಜೋಡಿ ಸೂಪರ್ ಎಂದಿದ್ದರು. ಮದುವೆಯಾಗಿ ಖುಷಿ ಖುಷಿಯಾಗಿದ್ದ ದಂಪತಿ ಇದೀಗ ನಾಲ್ಕೇ ವರ್ಷದಲ್ಲೇ ವೈವಾಹಿಕ ಜೀವನ ಅಂತ್ಯಗ“ಳಿಸಲು ನಿರ್ಧರಿಸಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಈಗಾಗಲೇ ಶುಭಪೂಂಜಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪತಿಯ ಜತೆಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇನ್ನು ಸದಾಕಾಲ ನಗು ನಗುತ್ತ, ಎಲ್ಲರನ್ನೂ ನಗಿಸುತ್ತ, ಶುದ್ಧ ಮನಸ್ಸಿನಿಂದ ಇದ್ದ ಹುಡುಗಿ ಶುಭಪೂಂಜಾ ಬಾಳಲ್ಲಿ ಈ ರೀತಿಯಾಗಿದ್ದು, ಬೇಸರದ ವಿಷಯ ಎನ್ನುತ್ತಿದ್ದಾರೆ ನೆಟ್ಟಿಗರು.




