Bollywood: ಪೆದ್ದಿ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್

Bollywood News: ಬಾಲಿವುಡ್ ನಟಿ ಜಾನ್ವಿ ಕಪೂರ್ ಥೇಟ್ ಅಮ್ಮನ ಹಾಗೆ. ದೇವರಲ್ಲಿ ಹೆಚ್ಚು ಭಕ್ತಿ. ಅದರಲ್ಲೂ ಅಮ್ಮನ ಹಾಗೆ ಪದೇ ಪದೇ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಹೋಗಿ, ಭಕ್ತಿಯಿಂದ ನಮಿಸಿ, ದರ್ಶನ ಪಡೆದು ಬರುತ್ತಾರೆ.

ಇದೀಗ ಅವರ ಪೆದ್ದಿ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿ ಜಾನ್ವಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಇದೇ ಜೂನ್ 4ರಂದು ಪೆದ್ದಿ ಸಿನಿಮಾ ರಿಲೀಸ್ ಆಗಿದೆ. ಜಾನ್ವಿ ತಮ್ಮ ಯಾವುದೇ ಸಿನಿಮಾ ರಿಲೀಸ್ ಆಗುವ ಮುನ್ನ ತಿರುಪತಿಗೆ ತಪ್ಪದೇ ಭೇಟಿ ನೀಡುತ್ತಾರೆ.

ಆದರೆ ಈ ಬಾರಿ ಸಿನಿಮಾ ರಿಲೀಸ್ ಆದ ಬಳಿಕ ಜಾನ್ವಿ ತಿರುಪತಿಗೆ ಭೇಟಿ ನೀಡಿದ್ದಾರೆ. ಎಂದಿನಂತೆ ಈ ಬಾರಿಯೂ ಜಾನ್ವಿ, ಸಾಮಾನ್ಯ ಭಕ್ತೆಯಂತೆ ಬೆಟ್ಟ ಹತ್ತಿ ದೇವರ ದರ್ಶನ ಮಾಡಿದ್ದಾರೆ, ತಾಯಿ ಶ್ರೀದೇವಿ ಬದುಕಿದ್ದಾಗ, ಪ್ರತೀ ವರ್ಷ ತಮ್ಮ ಬರ್ತ್‌ಡೇಗೆ ತಿರುಪತಿಗೆ ಭೇಟಿ ನೀಡುತ್ತಿದ್ದರು. ಇದೀಗ ಜಾನ್ವಿ ಕಪೂರ್ ಆ ಪರಂಪರೆಯನ್ನು ಮುಂದುವರೆಸಿದ್ದಾರೆ.

About The Author