ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿದ್ದ ಡಾ. ರಾಹುಲ್ ಗುಪ್ತಾ ಅವರನ್ನು ಜೋ ಬೈಡನ್ ಅಮೆರಿಕದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದರೆ 25 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ. ಗುಪ್ತಾ ಅವರಿಗೆ ಇಬ್ಬರು ಗೌರ್ನರ್ ಗಳ ಅವಧಿಯಲ್ಲಿ ವೆಸ್ಟ್ ವರ್ಜೀನಿಯಾದ ಆರೋಗ್ಯ ಆಯುಕ್ತರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಎಬೋಲಾ ವೈರಾಣು ಭೀತಿಯ ಸಂದರ್ಭದಲ್ಲಿ ರಾಜ್ಯದ ಝಿಕಾ ಕ್ರಿಯಾ ಯೋಜನೆಯ ಅಭಿವೃದ್ಧಿಯ ನೇತೃತ್ವವನ್ನೂ ಗುಪ್ತಾ ಅವರು ವಹಿಸಿಕೊಂಡಿದ್ದದ್ದು ಗಮನಾರ್ಹವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿರುವ ಗುಪ್ತಾ ಅವರು ಹಲವು ಸಂಘಟನೆಗಳಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




