ದೀಪಿಕಾ ಕುಮಾರಿಗೆ 9ನೇ ಸ್ಥಾನ

www.karnatakatv.net : ಒಲಂಪಿಕ್ ಶುರುವಾಗಿ ಮೊದಲಿಗೆ ಮಹಿಳೆಯರ ವೈಯಕ್ತಿಕ ಬಿಲ್ಲುಗಾರಿಕೆ ಸ್ಪರ್ಧಾ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ರ್ಯಾಂಕಿಂಗ್ ಸುತ್ತಿನಲ್ಲಿ 9ನೇ ಸ್ಥಾನಕ್ಕೆ ಗಿಟ್ಟಿಸಿಕೊಂಡಿದ್ದಾರೆ. ಟೋಕಿಯೊದ ಯುಮೆನೊಶಿಮ ಪಾರ್ಕ್ ನಲ್ಲಿ ಆರಂಭವಾದ ಒಲಿಂಪಿಕ್ ಅಭಿಯಾನದಲ್ಲಿ ಈ ಮೂಲಕ ಆರಂಭದಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.

ವಿಶ್ವದ ನಂಬರ್ 1 ಬಿಲ್ಲುಗಾರಿಕಾ ಪಟು ದೀಪಿಕಾ ಕುಮಾರಿ ಇಂದು ಮುಕ್ತಾಯವಾದ ಪಂದ್ಯದಲ್ಲಿ 663 ಅಂಕಗಳನ್ನು ಪಡೆದರೆ, ಕೊರಿಯಾದ ಅನ್ ಸಾನ್ 680 ಅಂಕಗಳನ್ನು ಗಳಿಸುವ ಮೂಲಕ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಸಾಕಷ್ಟು ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ದೀಪಿಕಾ ಮೊದಲ ಸುತ್ತಿನಲ್ಲಿ 56 ಅಂಕ ಗಳಿಸಿದರು. ನಂತರ ಎರಡನೇ ಸುತ್ತಿನಲ್ಲಿ 55 ಅಂಕಗಳನ್ನು ಗಳಿಸುವ ಮೂಲಕ ಟಾಪ್ 10 ಹಂತಕ್ಕೆ ಲಗ್ಗೆಯಿಟ್ಟರು. ಆದರೆ ನಾಲ್ಕನೇ ಸುತ್ತಿನಲ್ಲಿ ಕೇವಲ 51 ಅಂಕಗಳಿಸಿದ ದೀಪಿಕಾ 14ನೇ ಸ್ಥಾನಕ್ಕೆ ಜಾರಿದರು. ಆದರೆ ಐದನೇ ಸುತ್ತಿನಲ್ಲಿ 59 ಅಂಕಗಳನ್ನು ಗಳಿಸಿ ದಿಢೀರ್ ಕಮ್‌ಬ್ಯಾಕ್‌ ಮಾಡುವಲ್ಲಿ ದೀಪಿಕಾ ಯಶಸ್ವಿಯಾದರು.

About The Author