ಕಿಡ್ನಿ ಬದಲಾವಣೆಗಾಗಿ ಸಹಾಯ ಕೇಳುತ್ತಿರುವ ಕುಟುಂಬ

www.karnatakatv.net : ಚಾಮರಾಜನಗರ : ಕೊರೊನದ ನಡುವೆ  ಬದುಕ ಬಂಡಿಯನ್ನು ಎಳೆಯಲು ಕಷ್ಟ ಒಂದೆಡೆ , ಮತ್ತೊಂದೆಡೆ  ಗಂಡನ ಜೀವ ಕಾಪಾಡುವಲ್ಲಿ ಕಾಯಕ ಯೋಗಿಯಾಗಿರುವ ಹೆಂಡತಿ , ಇದು ಅಜ್ಜೀಪುರದಲ್ಲಿ ಇರುವ  ವಿಜಯ ಕುಮಾರ್ (37) ಮತ್ತು ಅಮುಧ (26) ದಂಪತಿಯ ವಾಸ್ತವ ಸ್ಥಿತಿ.

ಹೌದು  ತಾಲೂಕಿನ ಅಜ್ಜೀಪುರ ಗ್ರಾಮದ ಬೆಳ್ಳಳಗ ಜನಾಂಗದ ಇವರು ಕೂಲಿಗಾಗಿ ಕಾಡು ಮೇಡು ಅಳೆಯುತ್ತ ಜೀವನ ಕಳೆಯುತ್ತ ತನ್ನೆರಡು ಚಿನ್ನದಂತ ಹೆಣ್ಣು ಮಕ್ಕಳ ಜೊತೆಗೆ ಜೀವನ ಕಳೆಯುತ್ತಿದ್ದರು. 

ಆದರೆ ವಿಧಿ ಬರಹ ಬೇರೆಯೆ ಇತ್ತು ಇದರ ಪರಿಣಾಮ ವಿಜಯ ಕುಮಾರ್ ಎಂಬುವವರಿಗೆ ಎರಡು ಕಿಡ್ನಿ ಸಹ ಫೇಲ್ ಆಗಿದ್ದು ಈಗ ಜೀವನದ ಬಂಡಿ ನಿಂತಿದೆ. ಇದರಿಂದ ಅಮುಧ ಹಾಗೂ ವಿಜಯ್ ಕುಮಾರ್ ಎಂಬುವವರ ಜೀವನ ಅಧೋಗತಿ ತಲುಪಿದೆ.

ಕಿಡ್ನಿ ಬದಲಾವಣೆಗೆ ತಯಾರಿ  : ತನ್ನ ಗಂಡನಿಗೆ ಎರಡು ಕಿಡ್ನಿ ಫೇಲ್ ಆಗಿರುವ ಪರಿಣಾಮ ತನ್ನ ಒಂದು ಕಿಡ್ನಿಯನ್ನು ಗಂಡನಿಗೆ   ಬದಲಾವಣೆ ಮಾಡಲು ತಾನೇ ಒಪ್ಪಿದ್ದು ಇದೇ ತಿಂಗಳು 18 ರಂದೆ ಕಿಡ್ನಿ ಬದಲಾವಣೆ ಮಾಡಲು ತಯಾರಿದ್ದು ಈಗಾಗಲೇ ಕಾನೂನಿನಡಿಯಲ್ಲಿ ಎಲ್ಲಾ ತಯಾರಿ ನಡೆದಿದೆ. ಆದರೆ ಸಾಕಷ್ಟು ಹಣದ ಅವಶ್ಯಕತೆ ಇದ್ದು ಹಣಕ್ಕಾಗಿ ಅಂಗಲಾಚುತ್ತಿದ್ದಾರೆ. ಈಗಾಗಲೇ ಸಾಕಷ್ಟು ಹಣ ವ್ಯಯ ಮಾಡಿದ್ದು ಹಣಕ್ಕಾಗಿ ಕುಟುಂಬ ಬೇಡುತ್ತಿದೆ.

ಸಹಾಯಕ್ಕಾಗಿ ಬೇಡುತ್ತಿರುವ ಕುಟುಂಬ  : ಇಂತಹ ಸ್ಥಿತಿಯಲ್ಲಿ ಸಮಾಜದಲ್ಲಿ ಇನ್ನಿತರ ದಾನಿಗಳು ತಮ್ಮ ಕೈಲಾದ ಸಹಾಯ ಮಾಡಬೇಕು ಇಂತಹ ಸಹೃದಯಿ ಜನರಿಗೆ ಇನ್ನಿತರರು ಸಹಾಯ ಮಾಡಿ ಅದು ಖಾತೆ ಗೆ ಜಮಾ ಮಾಡಿದರು ಸರಿ ಇಲ್ಲವಾದಲ್ಲಿ ಅವರ ಮೊಬೈಲ್ ನಂಬರಿಗೆ ಫೋನ್ ಪೆ ಮಾಡಿಯಾದರು  ಅವರ ಅಂದ ಬಾಳಿಗೆ ಬೆಳಕಾಗಬೇಕು ಎಂಬುದು ಪತ್ರಿಕೆಯ ಆಶಯ.

ದಾನಿಗಳು ಸಂಪರ್ಕ ಮಾಡುವ ವಿಳಾಸ :

ಅಮುಧ ವಿಜಯಕುಮಾರ್.. ಅಜ್ಜೀಪುರ

ಫೋನ್ ನಂಬರ್ : 9886606838

 ಬ್ಯಾಂಕ್ ಖಾತೆ ಸಂಖ್ಯೆ 12232100005562

ಅಮುಧ w/ ವಿಜಯ ಕುಮಾರ್ 

ಕರ್ನಾಟಕ ಗ್ರಾಮೀಣ ಬ್ಯಾಂಕ್

ಅಜ್ಜೀಪುರ ಶಾಖೆ

IFSCPKGB0012232

ಫೋನ್ ಪೆ ನಂಬರ್ : 9845684824.

ಪ್ರಸಾದ್ ಯಡಹುಂಡಿ ಕರ್ನಾಟಕ ಟಿವಿ ಚಾಮರಾಜನಗರ

About The Author