www.karnatakatv.net : ಬೆಳಗಾವಿ: ಕೋರೊನಾ ಮಹಾಮಾರಿಯಿಂದ ದೇಶಕ್ಕೆ ಮಾರಕವಾಗಿದ್ದರ ಹಿನ್ನಲೆಯಲ್ಲಿ ಎಲ್ಲಾ ಶಾಲೆ ಕಾಲೇಜುಗಳನ್ನ ಬಂದ ಮಾಡಲಾಗಿತ್ತು ಸರಕಾರದ ಆದೇಶದ ಪ್ರಕಾರ ಇವತ್ತು ಬೆಳಗಾವಿ ಸರದಾರ ಶಾಲೆ ಸಿದ್ದತೆಗೊಳ್ಳುತ್ತಿದೆ.
ಸರಕಾರದ ಆದೇಶದ ಪ್ರಕಾರ ಆಗಸ್ಟ್ 23 ರಿಂದ 9-10 ನೇ ತರಗತಿಗಳನ್ನ ಆರಂಭಿಸಬೇಕು ಎಂದು ಮಾರ್ಗಸೂಚಿ ಬಂದಿದ್ದು ಈ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಶಿಕ್ಷಣ ಇಲಾಖೆಯಿಂದ ಶಾಲೆ ಪ್ರಾರಂಭಿಸಲು ಮುಂದಾಗಿದ್ದು ನಗರದ ಸರ್ದಾರ್ ಹೈಸ್ಕೂಲಿನಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.ಇದರಿಂದ ಸರಕಾರದ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಮಾಸ್ಕ್, ಸಾಮಾಜಿಕ ಅಂತರ, ಪಾಲಕರ ಅನುಮತಿ ಪತ್ರ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಸೇರಿಸಿಕೊಳ್ಳಲಾಗುವುದು ಎಂದರು.ಮತ್ತು ವಿದ್ಯಾರ್ಥಿಗಳ ಅನುಮತಿ ಕಡ್ಡಾಯವಾಗಿದೆ.
ಮತ್ತು ಸರ್ಕಾರದ ಮಾರ್ಗ ಸೂಚಿ ಪ್ರಕಾರ ಶಾಲೆ ಆರಂಭಿಸಲು ನಿರ್ಧಾರವಾಗಿದ್ದು.ಸರ್ಕಾರದ ಮಾರ್ಗ ಸೂಚಿ ಪ್ರಕಾರ ಶಾಲಾ ಕೊಠಡಿಯಲ್ಲಿ ಸಕಲ ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದೆ ಆಡಳಿತ ಮಂಡಳಿ.
ಆದ್ರೆ ಬೆಳಗಾವಿಯಲ್ಲಿ ಶಾಲೆ ಶುರು ಮಾಡೊದು ಸವಾಲಾಗಿದೆ. ಒಂದೆಡೆ ಬೆಳಗಾವಿ ಗಡಿ ಭಾಗ ಆಗಿರುವುದರಿಂದ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕರೋನ ಸೋಂಕಿತರ ಸಂಖ್ಯೆ ಇದರಿಂದ ಶಿಕ್ಷಣ ಇಲಾಖೆ ಯಾವ ರೀತಿಯಲ್ಲಿ ಶಾಲೆಗಳನ್ನ ನಡೆಸುತ್ತೆ ಅನ್ನೊದೆ ಒಂದು ಸವಾಲಾಗಿ ಪರಿಣಮಿಸಿದೆ.
ಈ ಸಂದರ್ಭದಲ್ಲಿ ಸರದಾರ ಶಾಲೆಯ ಕನ್ನಡ ಶಿಕ್ಷಕರಾದ ರವಿ ಹಲಕರ್ಣಿ ಮಾತನಾಡಿ
ಸರಕಾರದ ಆದೇಶದ ಪ್ರಕಾರ ಶಾಲೆಗಳನ್ನ ತೆರೆಯಲು ಮಾರ್ಗಸೂಚಿ ಬಂದಿದ್ದು ಈ ಹಿನ್ನೆಲೆಯಲ್ಲಿ ನಾವು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆವಾಗಿ ಶಾಲೆಗಳಿಗೆ ಸ್ಯಾನಿಟೈಸರ್ ಮಾಡುತ್ತಿದ್ದು ಆಗಸ್ಟ್ 23 ರಿಂದ 9-10 ನೇ ತರಗತಿಗಳನ್ನ ಆರಂಭಿಸಬೇಕು ಎಂದು ಸರಕಾರ ಆದೇಶ ಹೊರಡಿಸಿದ್ದು ಈ ಪ್ರಕಾರ ನಾವು ಎಲ್ಲ ಸಿದ್ದತೆ ಮಾಡಿಕೊಳ್ಳುತ್ತಿದ್ದೆವೆ.
ಹಾಗೇಯೆ ಪ್ರತಿ ತರಗತಿಗಳಲ್ಲಿ 20 ವಿದ್ಯಾರ್ಥಿಗಳನ್ನ ಮಾತ್ರ ಅನುಮತಿ ಇದೆ ಹಾಗಾಗಿ ಪ್ರತಿ ಮಕ್ಕಳು ಶಾಲೆಗೆ ಬರಬೇಕು ಅಂತಾ ಏನು ಆದೇಶ ಇಲ್ಲಾ ಪಾಲಕರ ಒಪ್ಪಿಗೆ ಮೇರೆಗೆ ಶಾಲೆಗೆ ಬರಲು ಅವಕಾಶ ಇದೆ. ಆದ್ದರಿಂದ ಸರಕಾರದ ಆದೇಶದ ಪ್ರಕಾರ ಶಾಲೆಗಳನ್ನ ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ