www.karnatakatv.net : ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಮಾಜಿ ಸಚಿವ ವಿನಯ ಕುಲರ್ಣಿ ಅವರು ಗತ್ತಿನಿಂದ ಮೀಸೆ ತಿರುವಿ ಬೆಂಬಲಿಗರನ್ನು ಹುರಿದುಂಬಿಸಿದರು. ಹಿಂಡಲಗಾ ಜೈಲಿನಿಂದ ಹೊರ ಬಂದ ಬಳಿಕ ಭರ್ಜರಿ ಸ್ವಾಗತ ಕೋರಿದ ಅಭಿಮಾನಿಗಳು ನಂತರ ಮೆರವಣಿಗೆ ನಡೆಸಿದರು. ತೆರೆದ ವಾಹನದಲ್ಲಿ ಹಿಂಡಲಗಾದಿಂದ ಬೆಳಗಾವಿ ವರೆಗೆ ರೋಡ್ ಶೋ ನಡೆಸಿದರು. ಐಷಾರಾಮಿ ಕಾರಿನಲ್ಲಿ ನಿಂತು ಶಕ್ತಿ ಪ್ರದರ್ಶಿಸಿದ ವಿನಯ್ ಕುಲಕರ್ಣಿ ಅವರು ಕೂ ಮುಗಿಯುತ್ತ, ಕೈ ಮಾಡುತ್ತ ಮುಂದೆ ಸಾಗಿದರು.
ಗಡಿ ಭಾಗ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಇನ್ನೂ ಬಂದಿಲ್ಲ. ಆದರೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಅಂತರ ಮರೆತು ರೋಡ್ ಶೋ ನಡೆಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ವಿನಯ ಕುಲಕರ್ಣಿ ಅವರೂ ಮಾಸ್ಕ್ ಧರಿಸಿರಲಿಲ್ಲ. ಪೊಲೀಸರು ಸ್ಥಳದಲ್ಲಿ ಇದ್ದರೂ ಇದನ್ನು ತಡೆಯಲು ಸಾಧ್ಯವಾಗಲಿಲ್ಲ.




