www.karnatakatv.net: ಕೇರಳಾದಲ್ಲಿ ಕೊರೋನಾ ಸೋಂಕು ಇನ್ನೇನು ಕಮ್ಮಿಯಾಯ್ತು ಅಂತ ಅಂದುಕೊಳ್ತಿರೋವಾಗಲೇ ಒಂದೇ ದಿನಕ್ಕೆ 31 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರೋದು ಪತ್ತೆಯಾಗಿದೆ.
ಹೌದು, ಮೊನ್ನೆ ಕೇರಳಾದ ಅತಿ ದೊಡ್ಡ ಹಬ್ಬ ಓಣಂ ಆಚರಣೆಯ ಬಳಿಕ ರಾಜ್ಯದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹಬ್ಬ ಆಚರಣೆ ತಯಾರಿಗಾಗಿ ಬಟ್ಟೆ ಅಂಗಡಿಗಳು, ಹೂವು-ಹಣ್ಣು ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ರು.
ಓಣಂ ಹಬ್ಬ ಆಚರಣೆಗೆ ಮಾರ್ಗಸೂಚಿಗಳನ್ನೂ ಹೊರಡಿಸಿದ್ದ ಕೇರಳಾ ಸರ್ಕಾರ, ಜನರು ಗುಂಪು ಸೇರೋಹಾಗಿಲ್ಲ ಅಂತ ತಿಳಿಸಿತ್ತು. ಆದ್ರೂ ಬರೋ ವರ್ಷಕ್ಕೊಂದು ಹಬ್ಬವನ್ನಾದ್ರೂ ಆಚರಿಸೋಣ ಅಂದುಕೊಂಡು ಎಗ್ಗಿಲ್ಲದೆ ರಸ್ತೆಗಳಲ್ಲಿ ಸುತ್ತಾಡಿದ್ದಾರೆ. ಪರಿಣಾಮ 31,445 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನು ಓಣಂ ಮರುದಿನ 1,65,273 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿತ್ತು ಇವರಲ್ಲಿ ಪಾಸಿಟಿವ್ ಬಂದಿದ್ದ 215 ಮಂದಿ ಕೇವಲ 24 ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಕೂಡ ಸೋಂಕು ಹರಡೋ ಆತಂಕ ಎದುರಾಗಿದೆ. ಕೇರಳ ಗಡಿ ಭಾಗ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವವರಿಂದ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಗಡಿ ಜಿಲ್ಲೆಗಳಲ್ಲಿ ವಿಧಿಸಿರುವ ನಿಯಮಗಳ ಜೊತೆಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕಿದೆ.
ಕಳೆದ ವರ್ಷ ಕೋವಿಡ್ ನಿರ್ವಹಣೆಗೆ ಕೇರಳಾ ದೇಶದಲ್ಲೇ ಮಾದರಿ ರಾಜ್ಯ ಅನ್ನೋ ಖ್ಯಾತಿಗೆ ಪಾತ್ರವಾಗಿತ್ತು. ಸಾಂಕ್ರಾಮಿಕ ರೋಗದ ವಿರುದ್ಧ ಸತತ ಹೋರಾಟ ನಡೆಸಿ ಕಳೆದ ವರ್ಷ ಓಣಂ ಹೊತ್ತಿಗೆ ಸೋಂಕು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು. ಆದ್ರೆ ಈ ಬಾರಿ ಎಲ್ಲಾ ತಲೆಕೆಳಕಾಗಿದ್ದು ಪರಿಸ್ಥಿತಿ ಹೀಗೆ ಮುಂದವರಿದ್ರೆ ಕೇರಳಾದಲ್ಲಿ ಮಾರಣಹೋಮ ನಡೆಯೋದ್ರಲ್ಲಿ ಸಂಶಯವೇ ಇಲ್ಲ.
ಈ ವರ್ಷದ ಓಣಂ ನಂತರ ಪ್ರಕರಣಗಳ ಗ್ರಾಫ್ ಅನ್ನು ನೋಡುವುದು ಸಹ ಇದೇ ರೀತಿಯ ಹೆಚ್ಚಳವನ್ನು ಸೂಚಿಸುತ್ತದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಇದು ತುಂಬಾ ಮಾರಕವಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.




