Sirsi: ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಆಗ್ರಹ

Sirsi News: ಶಿರಸಿ: ಇಂದು ಶಿರಸಿ ಗೋ ರಕ್ಷಣಾ ಸಮಿತಿಯವರು ಗೋಮಾತಾ ಗೌರವ ಅಭಿಯಾನದ ಆಹ್ವಾನ ಮನವಿಯನ್ನು ಶಿರಸಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರು.

ಈ ಕುರಿತು ಹಮ್ಮಿಕೊಳ್ಳಲಾದ ಅಭಿಯಾನವನ್ನು ಯಶಸ್ವಿಗೊಳಿಸಲು ಅವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ಭಾರತ ದೇಶದಲ್ಲಿ ಗೋವು ತಾಯಿ ಸ್ಥಾನದಲ್ಲಿದೆ.

ಇದು ಕೇವಲ ಹಿಂದೂಗಳಿಗಷ್ಟೇ ಅಲ್ಲ, ಭಾರತ ದೇಶದಲ್ಲಿ ವಾಸಿಸುವ ಪ್ರತಿಯೊoದು ಜಾತಿ -ಮತ -ಸಮಾಜದವರಿಗೂ ಗೋಮಾತೆ ತಾಯಿ ಸ್ಥಾನದಲ್ಲಿದ್ದಾಳೆ.

ಇಂತಹ ದೈವಭೂಮಿಯಲ್ಲಿ ಇಲ್ಲಿ ಗೋವಧೆ ಆಗಬಾರದು ಎಂದರು. ಎಪ್ರಿಲ್ 27ರಂದು ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಗೋರಕ್ಷಕ ದಳ ಶಿರಸಿ ಘಟಕ ಇದೇ ಸಂದರ್ಭದಲ್ಲಿ ಆಗ್ರಹಿಸಿತು.

About The Author