ಮಂಡ್ಯ: ಅಭಿವೃದ್ಧಿ ಕೆಲಸ ಮಾಡಿಸಿ ಅಂತ ಮನವಿ ಮಾಡಿಕೊಂಡ ಜನರ ಮೇಲೆ ಸಚಿವ ತಮ್ಮಣ್ಣ ಎಗರಾಡಿದ್ದಕ್ಕೆ ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವ ತಮ್ಮಣ್ಣ ಜನರ ಮೇಲೆ ಅಕ್ರೋಶ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದೆ ಸುಮಲತಾ, ನಿಮಗೆ ಬೇಜಾರಿದ್ರೆ ರಾಜಿನಾಮೆ ಕೊಡಿ, ಕೆಲಸ ಮಾಡೋರು ಇದ್ದಾರೆ. ನಿಮ್ಮ ಹೇಳಿಕೆಯೇ ಸೋಲಿಗೆ ಕಾರಣವಾಗಿರೋದನ್ನ ಮರೀಬೇಡಿ. ನಿಮ್ಮನೂ ಗೆಲಿಸಿದ್ದು ಜನರೇ ಇದನ್ನು ನೆನಪಿಟ್ಟುಕೊಳ್ಳಿ ಅಂತ ಸುಮಲತಾ ಸಚಿವ ತಮ್ಮಣ್ಣಾಗೆ ಭರ್ಜರಿ ಟಾಂಗ್ ನೀಡಿದ್ದಾರೆ.
ಮೈತ್ರಿ ಅಭ್ಯರ್ಥಿ ಸೋತದ್ದನ್ನು ಅರಗಿಸಿಕೊಳ್ಳಲಾಗದ ಸಚಿವ ಡಿಸಿ ತಮ್ಮಣ್ಣ ಮದ್ದೂರು ಕೆರೆ ಬಳಿ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ರು. ಮತ ಹಾಕದೆ ಅಭಿವೃದ್ಧಿ ಮಾಡಿ ಅಂತ ಕೇಳ್ತಿದ್ದೀರಲ್ಲ, ನಿಮಗೆ ನಾಚಿಕೆಯಾಗಲ್ವ ಅಂತ ಜನರ ಮೇಲೆ ಎಗರಿಬಿದ್ದಿದ್ರು.
ಸಿಎಂ ಆಗೇಬಿಡ್ತಾರಾ ಡಿಕೆಶಿ…???ಈ ವಿಡಿಯೋ ತಪ್ಪದೇ ನೋಡಿ




