Monday, December 11, 2023

Latest Posts

ಕಣ್ಣೀರು ಹಾಕುತ್ತಲೇ ವಿನಯ್ ಗುರೂಜಿ ಕ್ಷಮೆ ಕೋರಿದ ಆರೋಪಿ…!

- Advertisement -

ಚಿಕ್ಕಮಗಳೂರು:  ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ಕಣ್ಣೀರು ಹಾಕಿ ಕ್ಷಮೆ ಕೋರಿದ್ದಾನೆ.

ಗುರೂಜಿ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿ ನಾನು ತಿಳುವಳಿಕೆ ಇಲ್ಲದೆ ತಪ್ಪು ಮಾಡಿದ್ದೇನೆ. ಗುರೂಜಿಯವರ ಹೇಳಿಕೆಯ ಅರ್ಧಂಬರ್ಧ ವಿಡಿಯೋ ನೋಡಿದ್ದೇ ಇದಕ್ಕೆ ಕಾರಣವಾಗಿದೆ. ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ, ಗುರೂಜಿಯವರು ನಾಗಾರಾಧನೆ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ಅವರ ಆಶ್ರಮದಲ್ಲೇ ನಾಗಾರಾಧನೆ ಮಾಡುತ್ತಿದ್ದಾರೆ. ದಯಮಾಡಿ ನನ್ನನ್ನು ಕ್ಷಮಿಸಿಬಿಡಿ ಅಂತ ಆರೋಪಿ ಕಣ್ಣೀರು ಹಾಕುತ್ತಲೇ ಕ್ಷಮೆ ಕೇಳಿದ್ದಾನೆ.

ಕಳೆದ ಕೆಲ ದಿನಗಳ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ವಿನಯ್ ಗುರೂಜಿ ಪೂಜೆ ಎಂದರೆ ಏನು? ಏಕೆ ಪೂಜೆ ಮಾಡಬೇಕು? ಅದರಿಂದ ಏನಾಗುತ್ತದೆ ಅಂತ ತಿಳಿದುಕೊಂಡು ಪೂಜೆ ಮಾಡಿ. ನಾಗಮಂಡಲಕ್ಕಾಗಿ ಕೆಲವರು 2- 3 ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ನಾಗಮಂಡಲಕ್ಕೆ ಮಾಡುವ ಕೋಟಿ ಕೋಟಿ ಖರ್ಚಿನಲ್ಲಿ ಒಳ್ಳೆಯ ರಸ್ತೆ ಮಾಡಬಹುದು ಅಂತ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.

ಕರಾವಳಿಯ ಭಾಗದಲ್ಲಿ ಅಧಿಕವಾಗಿ ಆಚರಿಸಲ್ಪಡುವ ಭೂತಾರಾಧನೆ, ನಾಗಮಂಡಲ ಮತ್ತು ನಾಗಾರಾಧನೆಯ ಬಗ್ಗೆ ವಿನಯ್ ಗುರೂಜಿಯವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ  ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದತ್ತಾಶ್ರಮದ ಅನುಯಾಯಿಗಳು ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆಗೆ ದೂರು ನೀಡಿ ಗುರೂಜಿ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ದ ಕ್ರಮಕ್ಕೆ ಅಗ್ರಹಿಸಿದ್ದರು.

ರಾಜ್ಯಕ್ಕೆ ಬರಲಿದ್ದಾನೆ ತಿರುಪತಿ ತಿಮ್ಮಪ್ಪ…!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=1XEsLG3hQa4

- Advertisement -

Latest Posts

Don't Miss