- Advertisement -
www.karnatakatv.net :ಬೆಂಗಳೂರು : ದಿವಂಗತ ನಟ ಚಿರು ಸರ್ಜಾ ಕುಡಿಗೆ ಇವತ್ತು ನಾಮಕರಣ ಮಾಡಲಾಯ್ತು. ಇಷ್ಟು ದಿನ ಜ್ಯೂನಿಯರ್ ಚಿರು ಅಂತಾನೇ ಕರೆಸಿಕೊಳ್ತಿದ್ದ ಮುದ್ದು ಕಂದನಿಗೆ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದವ್ರು ಬ್ಯೂಟಿಫುಲ್ ಹೆಸ್ರಿಟ್ಟಿದ್ದಾರೆ.
ಇವತ್ತು ಬೆಂಗಳೂರಲ್ಲಿ ಚಿರು ಹಾಗೂ ಮೇಘನಾ ಕುಟುಂಬದವ್ರು ಹೋಟೆಲ್ ವೊಂದರಲ್ಲಿ ನಾಮಕರಣ ಮಾಡಿ, ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ನಾಮಕರಣ ನಡೆಯಿತು. ಅಂದಹಾಗೆ ಜ್ಯೂನಿಯರ್ ಚಿರುವಿಗೆ ರಾಯನ್ ಅಂತ ಹೆಸರಿಡಲಾಗಿದೆ. ಹೀಗಾಗಿ ಇನ್ಮುಂದೆ ಜ್ಯೂನಿಯರ್ ಚಿರು ರಾಯನ್ ರಾಜ್ ಸರ್ಜಾ ಅಂತ ಕೆರೆಸಿಕೊಳ್ತಾನೆ. ಇನ್ನು ಚಿರು ನಮಗೆ ರಾಜ, ಆ ರಾಜನ ಮಗ ನಮಗೆ ಯುವರಾಜ. ಹೀಗಾಗಿ ಈ ಹೆಸರು ಚೂಸ್ ಮಾಡಿದ್ದೀವಿ ಅಂತ ಮೇಘನಾ ಹೇಳಿದ್ರು.
ಕರ್ನಾಟಕ ಟಿವಿ – ಬೆಂಗಳೂರು
- Advertisement -

