- Advertisement -
ಉತ್ತರಪ್ರದೇಶ: ಕೊರೋನಾ 3ನೇ ಅಲೆಯ ಭೀತಿಯಲ್ಲಿರೋ ಮಧ್ಯೆಯೇ ಇದೀಗ ಡೆಂಘೀ ರುದ್ರ ನರ್ತನ ಮಾಡುತ್ತಿದ್ದು ಉತ್ತರಪ್ರದೇಶವೊಂದರಲ್ಲೆ 60 ಮಂದಿ ಸಾವನ್ನಪ್ಪಿದ್ದಾರೆ.
ಹೌದು ಕಳೆದ 10 ದಿನಗಳಿಂದ ಪಶ್ಚಿಮ ಉತ್ತರಪ್ರದೇಶದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗ್ತಿದೆ. 10 ದಿನಗಳ ಅವಧಿಯಲ್ಲೇ 50 ಮಂದು ಮಕ್ಕಳು ಸೇರಿ 60 ಮಂದಿ ಡೆಂಗ್ಯೂ ಮಹಾಮಾರಿಗೆ ಬಲಿಯಾಗಿದ್ದಾರೆ. ಫಿರೋಜಾಬಾದ್ ಜಿಲ್ಲೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿರೋ ಸೋಂಕಿಗೆ ಹೆಚ್ಚಾಗಿ ಮಕ್ಕಳು ಬಾಧಿತರಾಗಿದ್ದಾರೆ. ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿರೋ ಮಕ್ಕಳು ತೀವ್ರವಾಗಿ ಆಸ್ವಸ್ಥಗೊಂಡು ಸಾವನ್ನಪ್ಪುತ್ತಿದ್ದ ಬಗ್ಗೆ ತನಿಖೆ ನಡೆಸಿದ ವಿಶ್ವ ಸಂಸ್ಥೆ ಮಕ್ಕಳ ರಕ್ತದ ಮಾದರಿ ಸಂಗ್ರಹಿ ನಡೆಸಿದ ಅಧ್ಯಯನದಲ್ಲಿ ಇದು ಡೆಂಗ್ಯೂ ಅಂತ ಪತ್ತೆಹಚ್ಚಿದ್ದಾರೆ.
ಇನ್ನು ಮಥುರಾ ಮತ್ತು ಆಗ್ರಾದಲ್ಲೂ ಡೆಂಗ್ಯೂ ಸೋಂಕು ಹೆಚ್ಚಾಗುತ್ತಿರೋ ಬಗ್ಗೆ ವರದಿಯಾಗಿದೆ.

- Advertisement -