ಬೆಂಗಳೂರು: ರಾಜಕಾರಣಕ್ಕೆ ಸುಮಲತಾ ಹೊಸದಾಗಿ ಬಂದಿರೋ ಸುಮಲತಾ ಅವರ ಪ್ರಬುದ್ಧತೆಯನ್ನ ನೋಡಿ ನೀವು ಕಲಿತುಕೊಳ್ಳಿ ಅಂತ ಜೆಡಿಎಸ್-ಕಾಂಗ್ರೆಸ್ ಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಸದಾನಂದಗೌಡ, ಮಂಡ್ಯದಲ್ಲಿ ಮೈತ್ರಿ ಪಕ್ಷಗಳಿಗೆ ಜನ ಕಪಾಳಮೋಕ್ಷ ಮಾಡಿದ್ರೂ ಬುದ್ಧಿ ಬರಲಿಲ್ಲ. ಸಂಸದೆ ಸುಮಲತಾರನ್ನ ನೋಡಿ ಕಲೀರಿ. ರಾಜಕಾರಣಕ್ಕೆ ಹೊಬರರಾದ್ರೂ ಸುಮಲತಾರ ಪ್ರಬುದ್ಧತೆಯನ್ನ ಜೆಡಿಎಸ್ ನವರು ಕಲಿತುಕೊಳ್ಳಬೇಕು ಅಂತ ಲೇವಡಿ ಮಾಡಿದ ಡಿವಿಎಸ್, ನಿಮ್ಮ ಜನ್ಮ ಪೂರ್ತಿ ಸುಮಲತಾರ ಗುಣಗಳನ್ನು ನೀವು ಕಲಿತುಕೊಳ್ಳಲು ಆಗೋದಿಲ್ಲ ಅಂತ ಟೀಕಿಸಿದ್ರು.
ಇನ್ನು ಸುಮಲತಾ ಕ್ಷೇತ್ರದ ಹಾಗೂ ಜನರ ಅಭಿವೃದ್ಧಿಗಾಗಿ ಕೇಂದ್ರದ ಸಹಕಾರ ಬೇಕು ಅಂತ ಕೇಳಿಕೊಂಡಿದ್ದಾರೆ. ಇಂತಹ ಗುಣಗಳನ್ನು ಸ್ವಲ್ಪಾನಾದ್ರೂ ಕಲೀರಿ ಅಂತ ಸಂಸದೆ ಸುಮಲತಾರನ್ನು ಹಾಡಿಹೊಗಳೋ ಮೂಲಕ ಸದಾನಂದಗೌಡ ಮೈತ್ರಿ ಪಕ್ಷಗಳ ಕಿವಿ ಹಿಂಡಿದ್ದಾರೆ.
ಮಂಡ್ಯದ ಹೈದ ಮಾಡೆಲ್ ಆದದ್ದು ಹೇಗೆ ಗೊತ್ತಾ…??? ಮಿಸ್ ಮಾಡದೇ ಈ ವಿಡಿಯೋ ನೋಡಿ