Thursday, February 6, 2025

Latest Posts

ಕೊರೊನಾ ವೈರಸ್ ಮೂಲವನ್ನು ಪತ್ತೆ ಹಚ್ಚಲು ಇದೇ ಕೊನೆಯ ಅವಕಾಶ..!

- Advertisement -

www.karnatakatv.net : ವಿಶ್ವ ಆರೋಗ್ಯ ಸಂಸ್ಥೆ ಮಹಾಮಾರಿ ಕೊರೊನಾವೈರಸ್ ಮೂಲವನ್ನು ಪತ್ತೆ ಹಚ್ಚಲು 26 ತಜ್ಞರನ್ನು ಒಳಗೊಂಡ ಹೊಸ ತಂಡವನ್ನು ರಚಿಸಿದೆ. ಆದರೆ ಈ ವೈರಸ್ ಮೂಲವನ್ನು ಪತ್ತೆ ಹಚ್ಚಲು ಇದೇ ಕೊನೆಯ ಅವಕಾಶ ಎಂದು ತಿಳಿಸಿದ್ರು,

ಹೌದು.. ಮಹಾಮಾರಿಯಿಂದ ದೇಶಾನೆ ತತ್ತರಿಸಿ ಹೋಗಿದೆ. ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್ ಮೂಲ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಮೂಲವನ್ನು ಪತ್ತೆಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ಹೊಸ ಟಾಸ್ಕ್ಫೋರ್ಸ್ ರಚಿಸಿದ್ದು, ಕೋವಿಡ್ -19 ರ ಮೂಲವನ್ನು ಕಂಡುಹಿಡಿಯಲು ಕೊನೆಯ ಅವಕಾಶ ನೀಡುತ್ತಿರುವುದಾಗಿ ಹೇಳಿದೆ.

ಚೀನಾದ ವುಹಾನ್ ನಗರದಲ್ಲಿ ಕೊರೊನಾವೈರಸ್ ಪತ್ತೆಯಾಗಿ ಒಂದೂವರೆ ವರ್ಷಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಆದರೆ, ಇದು ಮೊದಲು ಹೇಗೆ ಕಾಣಿಸಿಕೊಂಡಿತು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಈ ವೈಜ್ಞಾನಿಕ ಸಲಹೆಗಾರರ ತಂಡ ಚೀನಾದ ವುಹಾನ್ ಮಾರುಕಟ್ಟೆಗಳಲ್ಲಿ ಕೊವಿಡ್ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತೆ ಅಥವಾ ಲ್ಯಾಬ್ ನಿಂದ ಸೋರಿಕೆಯಾಯಿತೆ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ಕಲೆಹಾಕಲಿದೆ. ಲ್ಯಾಬ್ ನಿಂದ ಆದ ತಪ್ಪಿನಿಂದ ಕೊವಿಡ್ ವೈರಸ್ ಹರಡಿತು ಎಂಬುದನ್ನು ಚೀನಾ ಈಗಾಗಲೇ ಬಲವಾಗಿ ನಿರಾಕರಿಸಿದೆ.

- Advertisement -

Latest Posts

Don't Miss