Friday, February 7, 2025

Latest Posts

ಮಾಲ್ಡಿವ್ಸ್ ಎದುರು ಭಾರತಕ್ಕೆ ಗೆಲುವು

- Advertisement -

www.karnatakatv.net :ಮಾಲ್ಡಿವ್ಸ್ ನ ಮಾಲೆಯಲ್ಲಿ ಬುಧವಾರ ನಡೆದ ಸಾಫ್ (ಸೌತ್ ಏಶ್ಯನ್ ಪುಟ್ಬಾಲ್ ಫೆಡರೇಶನ್) ಚಾಂಪಿಯನ್ ಶಿಪ್ ನಲ್ಲಿ ಭಾರತವು ಮಾಲ್ಡಿವ್ಸ್ ವಿರುದ್ಧ ಭರ್ಜರಿ ಗೆಲುವನ್ನು ದಾಖಲಿಸಿದೆ.ಭಾರತ 3-1 ಪಾಯಿಂಟ್ಸ್ ಗೆಲುವನ್ನು ಪಡೆದುಕೊಂಡಿದೆ.
ಇದರೊಂದಿಗೆ ಫೈನಲ್ ಅನ್ನು ಪ್ರವೇಶಿಸಿದೆ. ಅಲ್ಲದೆ ಪುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ಪತಾಕೆಯನ್ನು ತಂದು ಕೊಟ್ಟಿದ್ದಾರೆ .
ಬುಧವರ ನಡೆದಂತಹ ಪಂದ್ಯದಲ್ಲಿ ಸುನಿಲ್ ಛೆಟ್ರಿ ಜೋಡಿಗೋಲ್ ಗಳನ್ನು ಭಾರಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು .
ಮನ್ವೀರ್ ಸಿಂಗ್ ರವರು ತಂಡದ ಪ್ರಾರಂಭಿಕ ಹಂತದಲ್ಲಿ 33 ನೇ ನಿಮಿಷದಲ್ಲಿ ಗೋಲ್ ಗಳನ್ನು ಶರವೇಗದಲ್ಲಿ ಬಾರಿಸಿ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು .
ನಂತರ ಛೆಟ್ರಿಯವರು 62 ಮತ್ತು 71ನೇ ನಿಮಿಷದಲ್ಲಿ ಗೋಲ್ ಬಾರಿಸಿದರು ,ನಂತರ ತಂಡ ಇನ್ನಷ್ಟು ಮುನ್ನಡೆಯಾಗಿ ಗೆಲುವನ್ನು ದಾಖಲಿಸಿತು .
ಇಲ್ಲಿಯತನಕ ಅಂತರಾಷ್ಟ್ರೀಯ ಪುಟ್ಬಾಲ್ನಲ್ಲಿ ಪೀಲೆ 77 ಗೋಲ್ ದಾಖಲೆ ಹೊಂದಿದ್ದಾರೆ . ಛೆಟ್ರಿ 62 ನೇ ನಿಮಿಷದಲ್ಲಿ ಗೋಲ್ ಬಾರಿಸಿ ಪೀಲೆ ದಾಖಲೆಯನ್ನು ಮುರಿದಿದ್ದಾರೆ . ಒಟ್ಟಾರೆ ಛೆಟ್ರಿ ಈಗ 79 ಅಂತರಾಷ್ಟ್ರೀಯ ಗೋಲ್ ದಾಖಲೆ ಹೊಂದಿದ್ದಾರೆ .

ಸಂಪತ್‌ಶೈವ, ಸ್ಪೋಟ್ಸ್ ಡೆಸ್ಕ್, ಕರ್ನಾಟಕ ಟಿವಿ

- Advertisement -

Latest Posts

Don't Miss