Sunday, December 22, 2024

Latest Posts

ಸ್ಯಾಂಡಲ್ ವುಡ್ ಗೆ ಆಧುನಿಕ ಟೆಕ್ನಾಲಜಿಯುಳ್ಳ ಹೊಸ ಸ್ಟುಡಿಯೋ..!

- Advertisement -

www.karnatakatv.net: ಬೆಂಗಳೂರು: ನಗರದಲ್ಲಿ ಇಂದು ನಾಗರಭಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಫ್ರೈ.ಲಿಮಿಟೆಡ್ ಸಂಸ್ಥೆಯನ್ನು ಉದ್ಘಾಟಿಸಲಾಯಿತು.

ವಾಸು ಬುಕ್ಕಾಪಟ್ಟಣ ಮತ್ತು ಶ್ರೀ ಸಾಯಿಕೃಷ್ಣ ರವರು ಕ್ರಿಯೇಟಿವ್ ಟೈಮ್ಸ್ ಇಂಡಿಯಾ ಫ್ರೈ. ಲಿಮಿಟೆಡ್ ನ ರುವಾರಿಗಳಾಗಿದ್ದು, ಶರವೇಗದಲ್ಲಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನಗಳಿಗೆ ಅನುಗುಣವಾಗಿ, ಯಾವುದೇ ದೃಶ್ಯ ಮಾಧ್ಯಮದ ಬೇಡಿಕೆ ಗಳಿಗೆ ಬೇಕಾದ ಎಲ್ಲಾ ರೀತಿಯ ತಾಂತ್ರಿಕ ಸೌಲಭ್ಯಗಳು ಇಲ್ಲಿ ಲಭ್ಯವಿರಲಿದೆ.

ಹಾಡುಗಳ ಧ್ವನಿಮುದ್ರಣ, ಡಬ್ಬಿಂಗ್, ರೀ – ರೆಕಾರ್ಡಿಂಗ್, ಎಡಿಟಿಂಗ್, ಗ್ರೀನ್ & ಬ್ಲೂ ಮ್ಯಾಟ್ ಜೊತೆಗೆ ಅತ್ಯಾಧುನಿಕ ಉಪಕರಣ ಹಾಗೂ ಕ್ಯಾಮೆರಾಗಳು ಇಲ್ಲಿ ದೊರೆಯಲಿವೆ. ಹಾಗೆಯೇ ಈ ಸಂಸ್ಥೆ ಚಲನಚಿತ್ರ ನಿರ್ಮಾಣ, ಜಾಹೀರಾತು ಚಿತ್ರಗಳ ನಿರ್ಮಾಣ ಮತ್ತು ಪ್ರಚಾರ ಕೂಡ ಮಾಡಲಿದೆ. ಇದರ ಜೊತೆಗೆ ಇನ್ನೂ ಹಲವಾರು ಹೊಸ ಹೊಸ ಯೋಜನೆಗಳನ್ನು ಸಂಸ್ಥೆ ಹಮ್ಮಿ ಕೊಂಡಿದೆ. ಸಿನಿಮಾ, ಧಾರಾವಾಹಿ, ವೆಬ್ ಸೀರೀಸ್, ಆಲ್ಬಮ್ ಹಾಡುಗಳು , ಜಾಹೀರಾತು ಚಿತ್ರೀಕರಣ ಹಾಗೂ ಚಿತ್ರೀಕರಣದ ನಂತರದ ಕೆಲಸಗಳು ಒಂದೇ ಜಾಗದಲ್ಲಿ ಜಾಗದಲ್ಲಿ ಮಾಡಲು ಈ ಸಂಸ್ಥೆ ಅವಕಾಶ ಮಾಡಿ ಕೊಟ್ಟಿದೆ. ಈ ಕಾರ್ಯಕ್ರಮದಲ್ಲಿ ದೊಡ್ಡರಂಗೆಗೌಡ, ವಿ.ಮನೋಹರ್, ನಾಗೇಶ್ ವಿ ಬೆಟ್ಟಕೋಟಿ, ಸುನಿಲ್ ಪುರಾಣಿಕ್, ಸಾಯಿ ಪ್ರಕಾಶ್, ಬಾ ಮಾ ಹರೀಶ್ & ಗಿರೀಶ್, ಉಮೇಶ್ ಬಣಕಾರ್,ವಿಜಯ್ ಕುಮಾರ್ ಸಿಂಹ. ಭವ್ಯಶ್ರಿ ಭಾಗಿಯಾಗಿದ್ದರು.

ರೂಪೇಶ್. ಫಿಲಂ ಬ್ಯೂರೋ, ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss