Sunday, May 19, 2024

Latest Posts

T-20 ವರ್ಲ್ಡ್ ಕಪ್- ಭಾರತ-ಪಾಕ್ ಪಂದ್ಯ ನಡೆದೇ ತೀರುತ್ತೆ ಎಂದ ಬಿಸಿಸಿಐ..!

- Advertisement -

www.karnatakatv.net: ಒಂದೆಡೆ ವಿಶ್ವಾದ್ಯಂತ ಟಿ-20ವರ್ಲ್ಡ್ ಕಪ್ ಕ್ರೇಜ್ ಶುರುವಾಗಿದೆ. ಇನ್ನೂ ಈ ಟೂರ್ನಿಯಲ್ಲಿ ತಮ್ಮ ತಮ್ಮ ಫೇವರಿಟ್ ತಂಡ ಗೆಲ್ಲಬೇಕು ಅಂತ ಕ್ರಿಕೆಟ್ ಪ್ರೇಮಿಗಳು ದೇವರಲ್ಲಿ ಬೇಡಿಕೊಳ್ತಿದ್ದಾರೆ. ಮತ್ತೊಂದೆಡೆ ಇಂಡಿಯಾ-ಪಾಕ್ ತಂಡದ ಮಧ್ಯೆ ಹೈವೋಲ್ಟೇಜ್ ಮ್ಯಾಚನ್ನೇ ರದ್ದುಗೊಳಿಸಬೇಕು ಅನ್ನೋ ಕೂಗು ಕೇಳಿಬಂದಿದೆ. ಇದು ಕ್ರಿಕೆಟ್ ಪ್ರೇಮಿಗಳಲ್ಲಿ ಬೇಸರ ಮೂಡಿಸಿದ್ದು, ಇಂಡಿಯಾ-ಪಾಕ್ ಮ್ಯಾಚ್ ನಡೆಯುತ್ತೋ ಇಲ್ವೋ ಅನ್ನೋದಕ್ಕೆ ಸದ್ಯ ಬಿಸಿಸಿಐ ಸ್ಪಷ್ಟನೆ ನೀಡಿದೆ.

ಹೌದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ್ ಪ್ರೇರಿತ ಉಗ್ರರು ನಾಗರೀಕರ ಹತ್ಯೆ ಹಾಗೂ ಭಯೋತ್ಪಾದನಾ ಚುಟುವಟಿಕೆಗಳನ್ನು ಮುಂದುವರೆಸಿದೆ. ಇತ್ತ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗಾಗಿ ಸಕಲ ತಯಾರಿಯಲ್ಲಿ ತೊಡಗಿದೆ. ಈ ವರ್ಲ್ಡ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ್ ತಂಡವನ್ನು ಎದುರಿಸುತ್ತಿರೋದು ವಿಷೇಷ. ಆದ್ರೆ ಇದೇ ವಿಚಾರವಾಗಿ ಇದೀಗ ದೇಶಾದ್ಯಂತ ಅಪಸ್ವರ ಕೇಳಿಬರ್ತಿದೆ. ಹೌದು, ಉಗ್ರರಿಗೆ ಬೆಂಬಲ ನೀಡ್ತಿರೋ ಪಾಕ್ ಜೊತೆ ಭಾರತ ಪಂದ್ಯ ಆಡಬಾರದು. ಭಾರತ ಪಾಕ್ ವಿರುದ್ದದ ಮೊದಲ ಪಂದ್ಯದಿoದ ಹಿಂದೆ ಸರಿಯಬೇಕು ಅನ್ನೋ ಕೂಗು ಕೇಳಿಬರ್ತಿದೆ. ಅಲ್ಲದೆ ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾ ಅಭಿಯಾನ ಕೂಡ ನಡೀತಿದೆ. ಜೊತೆಗೆ ರಾಜಕಾರಣಿಗಳು ಕೂಡ ಇದೇ ಒತ್ತಾಯ ಮಾಡ್ತಿದ್ದಾರೆ.

ಹೀಗಾಗಿ ಅಕ್ಟೋಬರ್ 24ರಂದು ಪಂದ್ಯ ನಡೆಯುತ್ತೋ ಇಲ್ವೋ ಅನ್ನೋ ಪ್ರಶ್ನೆ ಎದ್ದಿದೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೂ ಸದ್ಯ ಬಿಸಿಸಿಐ ಸ್ಪಷ್ಟನೆ ನೀಡಿದೆ. ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆದ್ರೆ ಇದನ್ನೇ ಕಾರಣವಾಗಿ ಪರಿಗಣಿಸೋದಕ್ಕೆ ಸಾಧ್ಯ ಇಲ್ಲ. ಐಸಿಸಿ ಸಂಘಟಿಸುವ ಟೂರ್ನಿಯಲ್ಲಿ ಪ್ರತಿಯೊಂದು ತಂಡ ತನ್ನ ಎದುರಾಳಿ ವಿರುದ್ದ ಆಡಲೇಬೇಕು. ಇದನ್ನು ನಿರಾಕರಿಸುವ ಆಯ್ಕೆ ಯಾವುದೇ ಕ್ರಿಕೆಟ್ ಮಂಡಳಿಗೂ ಇಲ್ಲ. ಹೀಗಾಗಿ ಅಕ್ಟೋಬರ್ 24 ರಂದು ಭಾರತ-ಪಾಕ್ ಪಂದ್ಯ ನಡೆದೇ ತೀರುತ್ತೆ ಅಂತ ಬಿಸಿಸಿಐ ಖಡಕ್ ಆಗಿ ಹೇಳಿದೆ.

ಇನ್ನು ಟಿ-20 ವಿಶ್ವಕಪ್ ಇತಿಹಾಸದಲ್ಲೇ ಭಾರತದ ಸಾಂಪ್ರದಾಯಿಕ ವೈರಿ ಪಾಕ್ ಐದು ಬಾರಿ ಸೆಣಸಾಟ ನಡೆಸಿದೆ. ಆದ್ರೂ ಈ ಎಲ್ಲಾ ಐದೂ ಪಂದ್ಯಗಳಲ್ಲಿ ಪಾಕ್ ತಂಡವನ್ನು ಭಾರತ ಚೆಚ್ಚಿ ಬಿಸಾಡಿದೆ. ಇನ್ನೂ ಈ ಬಾರಿ ಕೂಡ ಭಾರತ ಪಾಕ್ ಗೆ ಮತ್ತೆ ಮಣ್ಣು ಮುಕ್ಕಿಸೋದಕ್ಕೆ ಸನ್ನದ್ಧವಾಗಿ ನಿಂತಿದೆ.

ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss