Saturday, June 21, 2025

Latest Posts

NEET ಸ್ನಾತಕೋತ್ತರ ಕೋರ್ಸ್ ಕೌನ್ಸೆಲಿಂಗ್ ತಡೆಯಲು ಸುಪ್ರೀಂ ಕೋರ್ಟ್ ಸೂಚನೆ..!

- Advertisement -

www.karnatakatv.net: ಒಬಿಸಿ, ಇಡಬ್ಲ್ಯೂಸಿ ಮೀಸಲು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಗಿಯುವವರೆಗೂ ನೀಟ್ ಸ್ನಾತಕೋತ್ತರ ಕೋರ್ಸ್ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಇಡಬ್ಲ್ಯೂಎಸ್ ಕೋಟಾ ಸೀಟು ಪಡೆಯಲು ಕೇಂದ್ರ ಸರ್ಕಾರದಿಂದ ಆದಾಯ ಮಿತಿ ನಿಗದಿ ಮಾಡಲಾಗಿದ್ದು, ವಾರ್ಷಿಕ 8 ಲಕ್ಷ ರೂ. ಆದಾಯ ಮಿತಿ ನಿಗದಿಯಾಗಿದೆ. ಈ 8 ಲಕ್ಷ ಆದಾಯ ಮಿತಿ ನಿಗದಿಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಎಂಡಿಎಸ್ ಕೋರ್ಸ್ ಗಳಿಗೆ ನಡೆಸಬೇಕಾಗಿದ್ದ ಕೌನ್ಸಿಲಿಂಗ್ ಗೆ ತಾತ್ಕಾಲಿಕ ತಡೆ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ನೀಟ್ ಪರೀಕ್ಷೆಯನ್ನು ಈ ಬಾರಿ ಇಂಗ್ಲಿಷ್ ಸೇರಿದಂತೆ 10 ಇತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿದೆ. ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಮರಾಠಿ, ಒಡಿಯಾ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ನಡೆದಿದೆ. ನೀಟ್ 2021 ಅರ್ಜಿ ನಮೂನೆಯಲ್ಲಿನ ಪ್ರಕ್ರಿಯೆಯು ಐದು ಹಂತಗಳನ್ನು ಒಳಗೊಂಡಿದೆ.

- Advertisement -

Latest Posts

Don't Miss