Monday, December 23, 2024

Latest Posts

ಸಖತ್ ಓಪನಿಂಗ್ ಪಡೆದ ಸಖತ್ ಸಿನಿಮಾ..!

- Advertisement -

www.karnatakatv.net:ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ ಸಖತ್ ಸಿನಿಮಾ ಇಂದು ತೆರೆಕಂಡಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿಂಪಲ್ ಸುನಿ ಹಾಗೂ ಗಣೇಶ್ ಜೊತೆಯಾಗಿ ಮಾಡಿರುವ ಎರಡನೇ ಸಿನಿಮಾ ಇದಾಗಿದ್ದು ಈ ಹಿಂದೆ ಚಮಕ್ ಚಿತ್ರದ ಮೂಲಕ ಒಂದಾಗಿದ್ದು, ಈ ಜೋಡಿ ಈಗ ಸಖತ್ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಬಹಳ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಇಂದು ತೆರೆ ಕಂಡಿದ್ದು, ಚಿತ್ರ ನೋಡಿದ ಪ್ರೇಕ್ಷಕರು ಸಖತ್ ಸಿನಿಮಾ ಸಕ್ಕತಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ. ಗಣೇಶ್, ನಿಶ್ವಿಕ ಹಾಗೂ ಸುರಭಿ ನಟನೆ, ರಂಗಾಯಣ ರಘು, ಸಾಧು ಕೋಕಿಲ, ರಾಮ ರಾಮ ರೇ ಧರ್ಮಣ್ಣ, ಗಿರಿ ಇವರುಗಳ ಹಾಸ್ಯಮಯ ಪಾತ್ರಗಳು ಪ್ರೇಕ್ಷಕರು ನಕ್ಕು ನಲಿಯುವಂತೆ ಮಾಡಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಜೂನಿಯರ್ ಬಾಲು ಪಾತ್ರ ಗಮನ ಸೆಳಯುತ್ತಿದ್ದು, ಜೂನಿಯರ್ ಬಾಲು ಪಾತ್ರದಲ್ಲಿ ಗಣೇಶ್ ಅವರ ಮಗ ವಿಹಾನ್ ಕಾಣಿಸಿಕೊಂಡಿದ್ದು. ವಿಹಾನ್ ಮೊದಲ ಬಾರಿ ಅಭಿನಯಿಸಿದ್ದರು, ಅದ್ಬುತವಾಗಿ ನಟಿಸಿದ್ದು ತೆರೆಮೇಲೆ ಚೆನ್ನಾಗಿ ಮೂಡಿಬಂದಿದೆ.

ಇನ್ನೂ ಚಿತ್ರದ ಹಾಡುಗಳು ಪ್ರೇಕ್ಷಕರ ಮನ ಮುಟ್ಟುವಂತೆ ಮೂಡಿಬಂದಿವೆ. ಜುಡಾ ಸ್ಯಾಂಡಿ ಅವರ ಸಂಗೀತ ಸಿನಿಮಾ ಅದ್ಬುತವಾಗಿ ಮೂಡಿಬರಲು ಮುಖ್ಯ ಕಾರಣವಾಗಿದೆ.
ಸಿನಿಮಾ ನೋಡಿ ಹೊರಬರುತ್ತಿದ್ದ ಪ್ರೇಕ್ಷಕರು ಕೆಲಹಾಡುಗಳನ್ನು ಗುನುಗುತ್ತಲೆ ಹೊರ ಬರುತ್ತಿದ್ದರು.

ಒಟ್ಟಾರೆ ಸಖತ್ ಸಿನಿಮಾ ಬರಿ ಯುವಕರು, ಗಣೇಶ್ ಅಭಿಮಾನಿಗಳು ಅಲ್ಲದೆ, ಪಕ್ಕ ಫ್ಯಾಮಿಲಿ ಎಂಟರ್ಟೈನ್ ಸಿನಿಮಾವಾಗಿದೆ. ಸಿಂಪಲ್ ಸುನಿ ನಿರ್ದೇಶನದ ಸಿನಿಮಾಗಳಲ್ಲಿ ಮನೋರಂಜನೆಗೆ ಮೋಸವಿಲ್ಲ ಎಂಬಂತಹ ಮಾತುಗಳು ನಿಜವಾಗಿದೆ.

ರೂಪೇಶ್ ಫಿಲಂ ಬ್ಯೂರೋ ಕರ್ನಾಟಕ ಟಿವಿ.

- Advertisement -

Latest Posts

Don't Miss