www.karnatakatv.net:ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ಮದಗಜ ಚಿತ್ರವು ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಬಹು ತಾರಗಳವುಳ್ಳ ಈ ಚಿತ್ರದಲ್ಲಿ ಆಶಿಕ ರಂಗನಾಥ್, ಗರುಡರಾಮ್,ಜಗಪತಿ ಬಾಬು, ರಂಗಾಯಣ ರಘು,ದೇವಯಾನಿ, ಚಿಕ್ಕಣ್ಣ, ಧರ್ಮಣ್ಣ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಇನ್ನೂ ಈ ಸಿನಿಮಾವನ್ನು ಅಯೋಗ್ಯ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶಿಸಿದ್ದಾರೆ.
ಈಗಾಗಲೇ ಹಾಡುಗಳು ಹಾಗೂ ಟ್ರೈಲರ್ ನಿಂದ ಗಮನಸೆಳೆಯುತ್ತಿರುವ ಮದಗಜ ಚಿತ್ರ, ನೆನ್ನೆ ನಗುತ ತಾಯಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಜನರ ಮೆಚ್ಚುಗೆಯನ್ನು ಪಡೆಯುತ್ತಿದೆ. ಈ ಹಾಡನ್ನು ಕೆ,ಜಿ,ಎಪ್ ಚಿತ್ರದ ಗರ್ಭದಿ ನನ್ನಿರಿಸಿ ಸಾಹಿತ್ಯ ಬರೆದಿದ್ದ ಬರೆದಿದ್ದ ಕಿನಲ್ ರಾಜ್ ಬರೆದಿದ್ದಾರೆ ಹಾಗೂ ಈ ಹಾಡಿಗೆ ಸಂತೋಷ್ ವೆಂಎಲ್ಲನಿಯನ್ನು ನೀಡಿದ್ದಾರೆ. ಅನೇಕ ಗಾಯಕರನ್ನು ಕರೆಸಿ ನಗುತ ತಾಯಿ ಹಾಡನ್ನು ಹಾಡಿಸಿದ್ದರು, ಒಪ್ಪದ ಚಿತ್ರ ತಂಡ ಕೋನೆಗೆ ಮೊದಲು ಟ್ರಾಕ್ ಹಾಡಿದ್ದ ಸಂತೋಷ್ ವೆಂಕಿ ಧ್ವನಿಯನ್ನೆ ಅಂತಿಮ ಗೋಳಿಸಿದ್ದಾರೆ. ವಿಷೇಶವಾಗಿ ಈ ಚಿತ್ರದಲ್ಲಿ 3 ಹಾಡುಗಳನ್ನು ಸಂತೋಷ್ ಅವರೇ ಹಾಡಿದ್ದಾರೆ.
ಇನ್ನೂ ನಗುತ ತಾಯಿ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ಉಮಾಪತಿ ಶ್ರೀನಿವಾಸ್ ಗೌಡ ಎಲ್ಲರು ಇಷ್ಟಪಡೋ ಅಂತ ಸಿನಿಮಾ ಮಾಡಿದ್ದೀವಿ, ಸಿನಿಮಾ ಅಂತ ಮಾಡೊವಾಗ ಫ್ಯಾಮಿಲಿನ ತಲೇಲಿ ಇಟ್ಟುಕೋಂಡು ಒಂದು ಒಳ್ಳೆ ಮೆಸೇಜ್ ಕೊಡ್ಬೆಕು ಅಂತ ಮಾಡಿರ್ತಿವಿ. ಹಾಗೆ ಸೆನ್ಸಾರ್ ಬೋರ್ಡ ಅವರನ್ನು ತಲೇಲಿ ಇಟ್ಟುಕೊಂಡು ಮಾಡಿರ್ತಿವಿ ಯಾಕೆಂದರೆ, ನಮಗೆ ಲಾಜಿಕ್ ಅನ್ನಿಸೋದು ಅವರಿಗೆ ಇಲ್ಲಾಜಿಕ್ ಅನ್ನಿಸುತ್ತೆ ಅದಿಕ್ಕೆ. ಎಲ್ಲರಿಗು ಇಷ್ಟವಾಗುವಂತ ಸಿನಿಮಾ ಎಲ್ಲೂಕೂಡ ಬೋರ್ ಆಗಲ್ಲ, ಕ್ಯೂರಿಯಾಸಿಟಿ ಉಟ್ಟಿಸುವಂತ ಸಿನಿಮಾ, ಹಾಗೆ ತಮ್ಮ ಬೆನುಬಾಗಿ ನಿಂತ ಪ್ರಾಶಾಂತ್ ನೀಲ್, ರವಿ ಬಸ್ರೂರ್, ಕ್ಯಾಮೆರಾ ಮ್ಯಾನ್ ನವೀನ್ ಕುಮಾರ್ ಅವರಿಗೆ ಉಮಾಪತಿ ಧನ್ಯವಾದ ತಿಳಿಸಿದರು.
ಚಿತ್ರದ ಬ್ಯೂಸಿನೆಸ್ ಬಗ್ಗೆ ಕೆಲ ಮಾಹಿತಿಗಳನ್ನು ಹಂಚಿಕೊoಡ ಉಮಾಪತಿ, ಬ್ಯೂಸಿನೆಸ್ ವಿಷಯವಾಗಿ ನನಗೆ ಕುಷಿ ಇದೆ ನಾನು 100% ಸೇಫ್
, ನಾನು ಹೂಡಿಕೆ ಮಾಡಿರೋದು ಈಗಾಗಲೆ ಬಂದಿದೆ, ಹೂಡಿಕೆ ಮಾಡಿರೋ ಮೊತ್ತ ವಾಪಸ್ ಬರೋದೆ ಕಷ್ಟ ಅಂತದ್ರಲ್ಲಿ ಈಗಾಗಲೆ ಲಾಭದಲ್ಲಿರುವುದು ನನಗೆ ಕುಷಿಯಾಗಿದೆ. ಸಿನಿಮಾದ ಹಿಂದಿ ಡಬ್ಬಿಂಗ್ ರೇಟ್ ಒಳ್ಳೆಯ ಮೊತ್ತಕ್ಕೆ ಸೇಲ್ ಆಗಿರುವುದು ಸಂತಸ ತಂದಿದೆ ಎನ್ನುವಂತಹ ಕುಷಿಯ ಮಾತುಗಳನ್ನು ವ್ಯಕ್ತ ಪಡಿಸಿದ್ದಾರೆ.
ಇನ್ನೂ ಇದೇವೇಳೆ ಪೈರಸಿ ಮಾಡುವವರ ಬಗ್ಗೆ ಮಾತನಾಡಿದ ನಿರ್ಮಾಪಕ ಉಮಾಪತಿ, ಆಂಟಿ ಪೈರಸಿ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಆ ತಂಡ ಅದರ ಬಗ್ಗೆ ಕಾಳಜಿವಹಿಸಲಿದೆ, ಪೈರಸಿ ಅಂತ ಬಂದಾಗ ಕಡೆಬಾರಿ ನಾವು ಏನೂ ಮಾತನಾಡಿದಿವಿ ಹಾಗೇ ನಡೆದುಕೋಂಡಿದ್ದೇನೆ, ಈ ಸಲ ನಾವು ಫ್ರೀ ಇದೀವಿ, ಬುದ್ದಿ ಕಲಿಸೋಕೇ ಕಾನೂನಿದೆ, ಕಾನೂನಿನ ರೀತಿ ಕ್ರಮವನ್ನು ಜರುಗಿಸ್ತೆವೆ, ಇದು ನಮ್ಮ ಒಂದು ಸಿನಿಮಾಕ್ಕೆ ಅಲ್ಲ ದೊಡ್ಡ ದೊಡ್ಡ ಸಿನಿಮಾಗಳಿಗು ತೊಂದರೆಯಾಗ್ತಿದೆ. ಇದರ ಬಗ್ಗೆ ಸರ್ಕಾರ ಗಮನ ಕೊಡಬೇಕು ಎಂಬ ಮಾತುಗಳನ್ನು ತಿಳಿಸಿದ್ದಾರೆ.
ಮದಗಜ ಚಿತ್ರವು ಇನ್ನೇರಡು ದಿನಗಳಲ್ಲಿ ತೆರೆಮೇಲೆ ಬರುತ್ತಿದ್ದು, 3ರಂದು ಕನ್ನಡದಲ್ಲಿ ತೆರೆಕಾಣುತ್ತಿದೆ ಹಾಗೂ ಇನ್ನುಳಿದ ಭಾಷೆಗಳಲ್ಲಿ ಡಿಸೆಂಬರ್ 10ರಂದು ತೆರೆಕಾಣಲಿದೆ.
ರೂಪೇಶ್ ಫಿಲಂ ಬ್ಯೂರೋ ಕರ್ನಾಟಕ ಟಿವಿ.

