Wednesday, July 2, 2025

Latest Posts

ಪ್ರತಿದಿನ ಒಂದು ಕೆಂಪು ಬಾಳೆ ಹಣ್ಣು ತಿಂದ್ರೆ ಅದರ ಪರಿಣಾಮವೇನಾಗತ್ತೆ ಗೊತ್ತಾ..?

- Advertisement -

ಬಾಳೆಹಣ್ಣಿನಲ್ಲಿ ತುಂಬಾ ವಿಧಗಳಿವೆ. ಭಾರತದಲ್ಲೇ 10ರಿಂದ 15 ವೆರೈಟಿ ಬಾಳೆ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಮೈಸೂರು ಬಾಳೆಹಣ್ಣು, ಕದಳಿ, ಬೂದಿ ಬಾಳೆ ಹಣ್ಣು, ಪಚ್ಚ ಬಾಳೆ ಹಣ್ಣು, ಚುಕ್ಕೆ ಬಾಳೆಹಣ್ಣು, ಮಿಟಬಾಳೆಹಣ್ಣು, ನೇಂದ್ರ ಬಾಳೆಹಣ್ಣು ಹೀಗೆ ಹಲವು ರೀತಿಯ ಬಾಳೆಹಣ್ಣುಗಳಿದೆ. ಆದ್ರೆ ಇವೆಲ್ಲದಕ್ಕಿಂತ ಅತ್ಯುತ್ತಮ ಗುಣವುಳ್ಳ ಬಾಳೆಹಣ್ಣು ಅಂದ್ರೆ ಕೆಂಪು ಸಿಪ್ಪೆಯ ಬಾಳೆಹಣ್ಣು. ಇಂದು ನಾವು ಕೆಂಪು ಸಿಪ್ಪೆಯ ಬಾಳೆಹಣ್ಣು ತಿನ್ನೋದ್ರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕೇರಳ ಮತ್ತು ತಮಿಳುನಾಡಿನಲ್ಲಿ ಈ ಕೆಂಪು ಸಿಪ್ಪೆಯ ಬಾಳೆಹಣ್ಣು ಹೆಚ್ಚಾಗಿ ಬೆಳೆಯುತ್ತಾರೆ. ಕೆಲವೆಡೆ ಇದನ್ನ ಚಂದ್ರಿಕಾ ಬಾಳೆಹಣ್ಣೆಂದು ಕರೆಯುತ್ತಾರೆ. ಹಳದಿ ಸಿಪ್ಪೆಯ ಬಾಳೆಹಣ್ಣಿಗಿಂತ ಹೆಚ್ಚಿನ ಪೋಷಕಾಂಶವುಳ್ಳ ಬಾಳೆಹಣ್ಣು ಇದಾಗಿದೆ.  ಈ ಬಾಳೆ ಹಣ್ಣನ್ನು ತಿನ್ನುವುದರಿಂದ ಕಿಡ್ನಿಯಲ್ಲಿ ಕಲ್ಲಾಗುವುದನ್ನು ತಡೆಯಬಹುದು. ಯಾಕಂದ್ರೆ ಬೇರೆ ಬಾಳಹಣ್ಣಿಗಿಂತ ಕೆಪ್ಪು ಸಿಪ್ಪೆಯ ಬಾಳೆಹಣ್ಣಿನಲ್ಲಿ ಹೆಚ್ಚಿನಷ್ಟು ಪೋಟ್ಯಾಶಿಯಂ ಇರುತ್ತದೆ. ಈ ಕಾರಣಕ್ಕೆ ಇದು ಆರೋಗ್ಯಕರವಾಗಿದೆ.

ಇನ್ನು ನೀವೇನಾದ್ರೂ ಡಯಟ್ ಮಾಡುತ್ತಿದ್ದರೆ, ಆರೋಗ್ಯಕರವಾಗಿ ಸ್ಲಿಮ್ ಆಗ್ಬೇಕು ಅಂತಿದ್ರೆ ನಿಮ್ಮ ಡಯಟ್ ಪಟ್ಟಿಯಲ್ಲಿ ಈ ಕೆಂಪು ಸಿಪ್ಪೆಯ ಬಾಳೆಹಣ್ಣನ್ನು ಸೇರಿಸಿಕೊಳ್ಳಿ. ಇದು ತೂಕ ಇಳಿಕೆಯಲ್ಲಿ ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾಗಿದ್ರೆ, ನೀವು ಕೆಂಪು ಸಿಪ್ಪೆಯ ಬಾಳೆಹಣ್ಣು ತಿನ್ನಬೇಕು. ಇದರಿಂದ ನಿಮ್ಮ ದೇಹದಲ್ಲಿರುವ ರಕ್ತಕಣಗಳು ಹೆಚ್ಚುತ್ತದೆ. ಮತ್ತು ಇದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ನಿಮಗೆ ಹೃದಯ ಸಮಸ್ಯೆ ಇದ್ದಲ್ಲಿ ಈ ಚಂದ್ರಿಕಾ ಬಾಳೆಹಣ್ಣಿನ ಸೇವನೆ ಮಾಡಬಹುದು. ಈ ಹಣ್ಣಿನಲ್ಲಿ ಹಳದಿ ಸಿಪ್ಪೆ ಬಾಳೆಹಣ್ಣಿಗಿಂತಲೂ ವಿಟಾಮಿನ್‌ ಸಿ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದನ್ನು ಸೇವಿಸಿದ್ದಲ್ಲಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೇ ನಿಮಗೆ ಡಯಾಬಿಟೀಸ್ ಬರಬಾರ್ದು ಅಂದ್ರೆ ಪ್ರತಿ ದಿನ ಅಥವಾ ಎರಡು ದಿನಕ್ಕೊಮ್ಮೆ ಒಂದು ಕೆಂಪು ಸಿಪ್ಪೆ ಬಾಳೆಹಣ್ಣು ತಿನ್ನಬೇಕು. ಇದರಲ್ಲಿ ಫೈಬರ್ ಕಂಟೆಂಟ್ ಹೆಚ್ಚಾಗಿರುವುದರಿಂದ ಇದು ಡಯಾಬಿಟೀಸ್ ಬರುವುದನ್ನು ತಡೆಗಟ್ಟುತ್ತದೆ.

- Advertisement -

Latest Posts

Don't Miss