Tuesday, December 24, 2024

Latest Posts

ಬುದ್ಧಿವಂತರಾಗಬೇಕು ಅಂದ್ರೆ ಈ ಆಹಾರವನ್ನು ತಿನ್ನಬೇಕು..

- Advertisement -

ಮನುಷ್ಯನ ಜೀವನ ಒಳ್ಳೆಯದಾಗಿರಲು, ಅವನು ಯಶಸ್ಸು ಗಳಿಸಬೇಕು. ಹಾಗೆ ಯಶಸ್ಸು ಗಳಿಸಲು ಮನುಷ್ಯನ ಬುದ್ಧಿ ಶಕ್ತಿ ಉತ್ತಮವಾಗಿರಬೇಕು. ಹಾಗೆ ಮನುಷ್ಯ ಬುದ್ಧಿವಂತನಾಗಬೇಕು ಅಂದ್ರೆ ಅವನ ಮೆದುಳು ಚುರುಕಾಗಬೇಕು.. ಹಾಗೆ ಮೆದುಳು ಚುರುಕಾಗಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.

ಮೊದಲನೇಯದಾಗಿ ಬ್ರಾಹ್ಮಿ ಎಲೆ. ಮಕ್ಕಳು ಬುದ್ಧಿವಂತರಾಗಲು, ಕಲಿಯುವುದರಲ್ಲಿ ಮುಂದಿರಲು, ನೆನಪಿನ ಶಕ್ತಿ ಉತ್ತಮವಾಗಿರಬೇಕು ಅಂದ್ರೆ ಬ್ರಾಹ್ಮಿ ಎಲೆ ತಿನ್ನಲು ಕೊಡಿ. ಪ್ರತಿದಿನ 5 ಎಲೆ ತಿಂದರೆ ಸಾಕು. ನಿಮಗೆ ಐದು ಎಲೆ ತಿನ್ನಲಾಗದಿದ್ದಲ್ಲಿ 2 ಎಲೆ ತಿನ್ನಿ. ಇದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ನೆನಪಿನ ಶಕ್ತಿ ಹೆಚ್ಚಾದಾಗ ನೀವು ಓದಿದ್ದೆಲ್ಲ ನಿಮಗೆ ನೆನಪಿರುತ್ತದೆ. ಇನ್ನು ಬ್ರಾಹ್ಮಿ ಎಲೆಯನ್ನು ತಿಮರೆ, ಸರಸ್ವತಿ ಎಲೆ, ಒಂದೆಲಗ ಅಂತಾ ಕರೆಯಲಾಗುತ್ತದೆ.

ಎರಡನೇಯದಾಗಿ ಚಿಕ್ಕ ತುಂಡು ಬಜೆಯನ್ನ ಮಕ್ಕಳಿಗೆ ತಿನ್ನಲು ಕೊಡಬೇಕು. ಎಷ್ಟು ಚಿಕ್ಕ ಅಂದ್ರೆ ಲವಂಗದಷ್ಟು ಚಿಕ್ಕ ತುಂಡು ಬಜೆಯನ್ನ  ವಾರದಲ್ಲಿ ಎರಡರಿಂದ ಮೂರು ಬಾರಿ ಕೊಟ್ಟರೂ ಸಾಕು. ಇದರಿಂದ ಕೂಡ ನಿಮ್ಮ ಮಕ್ಕಳ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ. ಮತ್ತು ಉಚ್ಛಾರ ಕೂಡ ಉತ್ತಮವಾಗುತ್ತದೆ. ಎಂಥ ಕಷ್ಟದ ಹೆಸರನ್ನು ಕೂಡ ನಿಮ್ಮ ಮಕ್ಕಳು ಸರಾಗವಾಗಿ ಹೇಳುತ್ತಾರೆ.

ಮೂರನೇಯದಾಗಿ ಪ್ರತಿದಿನ ರಾತ್ರಿ 5 ಬಾದಾಮ್ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನಬೇಕು. ಹೀಗೆ ಮಾಡಿದ್ದಲ್ಲಿ ನಿಮ್ಮ ನೆನಪಿನ ಶಕ್ತಿ ಉತ್ತಮವಾಗಿರುತ್ತದೆ. ಬಾದಾಮ್ ತಿನ್ನುವುದರಿಂದ ಹಲವು ಆರೋಗ್ಯ ಸಮಸ್ಯೆ ದೂರವಾಗುತ್ತದೆ.

ನಾಲ್ಕನೇಯದಾಗಿ ಅಖ್ರೋಟ್ ಸೇವಿಸಿ. ದಿನಕ್ಕೆ ಎರಡು ಅಖ್ರೋಟ್ ತಿಂದರೂ ಸಾಕು. ಇದು ನೋಡೋಕ್ಕೆ ಥೇಟ್ ಮೆದುಳಿನ ಶೇಪ್‌ನಲ್ಲಿದ್ದು, ಇದನ್ನು ಸೇವಿಸಿದ್ದಲ್ಲಿ ನಿಮ್ಮ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ವೈದ್ಯರು ಗರ್ಭಿಣಿಯರಿಗೆ ಪ್ರತಿದಿನ ಅಖ್ರೋಟನ್ನು ತಿನ್ನಲು ಹೇಳುತ್ತಾರೆ. ಯಾಕಂದ್ರೆ ಅಖ್ರೋಟ್ ತಿನ್ನುವುದರಿಂದ ಹೊಟ್ಟೆಯಲ್ಲಿರುವ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆಯಂತೆ.

- Advertisement -

Latest Posts

Don't Miss