ಒಮಿಕ್ರಾನ್ ಆತಂಕದ ಮಧ್ಯೆ ಬೆಳಗಾವಿ ಅಧಿವೇಶನ ವಿಚಾರದ ಬಗ್ಗೆ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೇವಲ ಒಂದು ವಾರ ಮಾತ್ರ ಅಧಿವೇಶನ ನಡೆಸುವಂತೆ ಕಳೆದ ಸಂಪುಟ ಸಭೆಯಲ್ಲಿ ಕೆಲವು ಸಚಿವರಿಂದ ಸಲಹೆ ನೀಡಲಾಗಿತ್ತು. ಆದರೆ ಕೆಲ ಸಚಿವರ ಸಲಹೆಗೆ ಸಿಎಂ, ಕಾನೂನು ಸಚಿವರು ಒಪ್ಪಿಗೆ ಸೂಚಿಸಿಲ್ಲ. 1 ವಾರಕ್ಕಷ್ಟೇ ಸೀಮಿತಗೊಳಿಸಿದರೆ ವಿಪಕ್ಷಗಳಿಗೆ ಅಸ್ತ್ರವಾಗುತ್ತೆ. ಹೀಗಾಗಿ 2 ವಾರ ಸದನ ನಡೆಸುವುದು ಉತ್ತಮ ಎಂದು ಸಿಎಂ ಹೇಳಿದ್ದಾರೆ. ಡಿಸೆಂಬರ್ 13 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುವರ್ಣಸೌಧದ ಸುತ್ತ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಳಗಾವಿಯಲ್ಲಿ ಡಿಸಿಪಿ ವಿಕ್ರಂ ಆಮಟೆ ಈ ಕುರಿತು ಹೇಳಿಕೆ ನೀಡಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆ ಅನುಮತಿ ಇಲ್ಲದೆ ಧರಣಿ ಮಾಡುವಂತಿಲ್ಲ. ನಿಗದಿ ಪಡಿಸಿದ ಸ್ಥಳಗಳಲ್ಲೇ ಪ್ರತಿಭಟನೆ ನಡೆಸುವಂತೆ ಸೂಚನೆ ಕೊಡಲಾಗಿದೆ. ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಹೇಳಲಾಗಿದೆ.




