ಭಾರತ ಸೇರಿ ಹಲವು ದೇಶಗಳಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ರೈಲಿನ ಮೂಲಕ ಚಲಿಸಿ ತಮ್ಮ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಆದ್ರೆ ಕೆಲ ದೇಶಗಳಲ್ಲಿ ಇದು ಸಾಧ್ಯವಿಲ್ಲಾ. ಯಾಕಂದ್ರೆ ಆ ದೇಶದಲ್ಲಿ ರೈಲುಗಳೇ ಇಲ್ಲಾ.. ಹಾಗಾದ್ರೆ ಯಾವುದು ಆ ದೇಶಗಳು ಅನ್ನೋದನ್ನ ನೋಡೋಣ ಬನ್ನಿ..
ಐಸ್‌ಲ್ಯಾಂಡ್: ಈ ದೇಶದಲ್ಲಿ ಮೊದಲು ರೈಲುಗಳನ್ನು ಬಳಸಲಾಗುತ್ತಿತ್ತು. ಹಾಲಿನ ಉತ್ಪನ್ನವನ್ನು ಸಾಗಿಸಲು, ಕಲ್ಲಿದ್ದಲು, ಕಲ್ಲುಗಳು ಸೇರಿ ಹಲವು ವಸ್ತುಗಳನ್ನು ಸಾಗಿಸಲು ರೈಲಿನ ಬಳಕೆ ಮಾಡಲಾಗುತ್ತಿತ್ತು. ಆದ್ರೆ ಕೆಲ ವರ್ಷಗಳ ನಂತರ ರೈಲಿನ ಬಳಕೆ ನಿಲ್ಲಿಸಲಾಯಿತು. ಇನ್ನು ಇಲ್ಲಿ ಯಾಕೆ ರೈಲಿನ ಬಳಕೆ ಮಾಡಲಾಗುವುದಿಲ್ಲ ಅಂತಾ ನೋಡೋದಾದ್ರೆ, ಮೊದಲನೇಯದಾಗಿ ಇಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕಾರ್ ಇದೆ. ಎರಡನೇಯದಾಗಿ ಇಲ್ಲಿನ ಜನಸಂಖ್ಯೆ ಕಡಿಮೆ. ಮೂರನೇಯದಾಗಿ ಇಲ್ಲಿನ ವಾತಾವರಣ ತಂಪಾಗಿರುವ ಕಾರಣ ಇಲ್ಲಿ ರೈಲಿನ ಬಳಕೆ ಮಾಡೋದಿಲ್ಲಾ.
ಭೂತಾನ್: ಐಸ್‌ಲ್ಯಾಂಡ್‌ಗಿಂತಲೂ ಹೆಚ್ಚಿನ ತಾಪಮಾನ ಹೊಂದಿರುವ ದೇಶ ಅಂದ್ರೆ ಭೂತಾನ್. ಇಲ್ಲಿಯೂ ಕೂಡ ರೈಲಿನ ಬಳಕೆ ಮಾಡುವುದಿಲ್ಲ. ಇದಕ್ಕೆ ಮೊದಲ ಕಾರಣ ಇಲ್ಲಿ ಬೆಟ್ಟ ಗುಡ್ಡಗಳೇ ಹೆಚ್ಚಿದೆ. ಅಲ್ಲದೇ ಜನ ಆಗಾಗ ವಲಸೆ ಹೋಗುವ ಕಾರಣ ಇಲ್ಲಿ ರೈಲಿನ ಬಳಕೆ ಮಾಡುವುದಿಲ್ಲ ಎನ್ನಲಾಗಿದೆ.
ಎಂಡೋರಾ: ಎಂಡೋರಾದಲ್ಲೂ ರೈಲಿನ ಬಳಕೆ ಮಾಡಲ್ಲ. ಯಾಕಂದ್ರೆ ಇಲ್ಲೂ ಕೂಡ ಬೆಟ್ಟ ಗುಡ್ಡಗಳು ಹೆಚ್ಚಿನ ಸಂಖ್ಯೆಯಲ್ಲಿದೆ. 2004ರಲ್ಲಿ ಇಲ್ಲಿ ಮೆಟ್ರೋ ಎರಾ ಎಂಬ ಹೆಸರಿನ ಮೆಟ್ರೋ ರೈಲು ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿತ್ತು. ಆದ್ರೆ ಅದು ಸಾಧ್ಯವಾಗಲಿಲ್ಲ.
ಲಿಬಿಯಾ: 90ರ ದಶಕದಲ್ಲಿ ಇಲ್ಲಿ ರೈಲಿನಲ್ಲಿ ಸಂಚಾರ ಮಾಡಲಾಗಿತ್ತು. ನಂತರ ಇಲ್ಲಿನ ರೈಲಿನ ಪಟ್ರಿ ಭಾಗ ಮುರಿಯತೊಡಗಿತು. ಆದ್ರೆ ಅದನ್ನು ಸರಿ ಮಾಡಲು ಆರ್ಥಿಕ ಸಂಕಷ್ಟ ಉಂಟಾಗಿತ್ತು. ಹಾಗಾಗಿ ಮತ್ತೆ ರೈಲಿನ ಬಳಕೆ ಮಾಡುವ ಮನಸ್ಸು ಯಾರೂ ಮಾಡಲಿಲ್ಲ.
ಸಿಪ್ರಸ್: ಸಿಪ್ರಸ್ ದೇಶದಲ್ಲಿ ರೈಲು ಅನ್ನೋದು ಇತಿಹಾಸವಾಗಿ ಹೋಗಿದೆ. ಯಾಕಂದ್ರೆ, ಇಲ್ಲಿ ರೈಲಿನ ಮ್ಯೂಸಿಯಂ ಇದೆ. ಅದನ್ನ ನೋಡಿದ್ರೆ ಇಲ್ಲೂ ಕೂಡ ರೈಲಿನ ಬಳಕೆ ಮಾಡುತ್ತಿದ್ದರು ಅನ್ನೋದು ಸಾಬೀತಾಗತ್ತೆ. ಇನ್ನು ಇಲ್ಲಿದ್ದ ರೈಲ್ವೇ ಸ್ಟೇಶನ್‌ಗಳು ಪೊಲೀಸ್ ಸ್ಟೇಶನ್‌ಗಳಾಗಿ ಮಾರ್ಪಟ್ಟಿದೆ.
ಮಾಲ್ಟಾ: ಮಾಲ್ಟಾ ಎಂಬ ದೇಶದಲ್ಲಿಯೂ ರೈಲಿನ ಬಳಕೆ ನಿಲ್ಲಿಸಲಾಗಿದೆ. ಇಲ್ಲಿ ಬೋಟ್, ಡಬಲ್ ಡೆಕ್ಕರ್ ಬಸ್‌ನಲ್ಲಿಯೇ ಜನರು ಪ್ರಯಾಣಿಸೋದು. ಇಲ್ಲಿಯೂ ಒಂದೇ ಒಂದು ರೈಲನ್ನು ಬಳಸಲಾಗುತ್ತಿತ್ತು. ಆದ್ರೆ ಅದನ್ನು ಕೂಡ 1931ರಲ್ಲಿ ನಿಲ್ಲಿಸಲಾಯಿತು.
ಕುವೈತ್: ಕುವೈತ್ ದೇಶ ಶ್ರೀಮಂತ ದೇಶವಾಗಿದೆ. ಹಾಗಾಗಿಯೇ ಇಲ್ಲಿ ಜನ ರೈಲಿನಲ್ಲೆಲ್ಲ ಓಡಾಡುವುದಿಲ್ಲ. ಬದಲಾಗಿ ಕಾರ್‌ನಲ್ಲಿಯೇ ಓಡಾಡುತ್ತಾರೆ. ಯಾಕಂದ್ರೆ ಇಲ್ಲಿ ತೈಲ ಉತ್ಪಾದಿಸುವ ಕಾರಣ ಇಲ್ಲಿ ತೈಲ ಬೆಲೆ ಕಡಿಮೆ ಇದೆ. ಹಾಗಾಗಿ ಜನ ಸಾರ್ವಜನಿಕ ಸಾರಿಗೆ ಬಳಸುವುದು ಕಡಿಮೆ.
ಸುರೇನಾಮ್: ದಕ್ಷಿಣ ಅಮೆರಿಕದ ಸಣ್ಣ ದೇಶವಾಗಿರುವ ಸುರೇನಾಮ್ನಲ್ಲಿ ರೈಲು ಬಳಕೆ ಇಲ್ಲ.