Wednesday, December 11, 2024

Latest Posts

International News: ಪಾಕಿಸ್ತಾನದಲ್ಲಿ ನದಿಗೆ ಉರುಳಿದ ಬಸ್ : 26 ಮಂದಿ ಸಾವು

- Advertisement -

International News: ಮದುವೆ ದಿಬ್ಬಣದ ಬಸ್ ವೊಂದು ಸಿಂಧೂ ನದಿಗೆ ಉರುಳಿ 26 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಉತ್ತರ ಗಿಲ್ಗಿಟ್- ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮದುವೆಗೆ ಬಂದಿದ್ದ ಅತಿಥಿಗಳು ಜಿಬಿ ಪ್ರದೇಶದ ಆಸ್ಟರ್ ಪ್ರದೇಶದಿಂದ ಬಸ್ ಮೂಲಕ ಚಕ್ವಾಲ್ ಜಿಲ್ಲೆಗೆ ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದ್ದು, 28 ಜನರನ್ನು ಹೊತ್ತಾಯ್ಯುತ್ತಿದ್ದ ಬಸ್‌, ಸಿಂಧುನದಿಗೆ ಬಿದ್ದು, ಅದರಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಬಚಾವಾಗಿದ್ದಾರೆ. 16 ಮಂದಿಯ ಶವವನ್ನು ನೀರಿನಿಂದ ತೆಗೆಯಲಾಗಿದೆ. ಉಳಿದವರ ಶವಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ.

- Advertisement -

Latest Posts

Don't Miss