Wednesday, July 2, 2025

Latest Posts

ಸಾವಿರಾರು ಕೋಟಿ ಇದ್ದರೂ ,ಪರಿಷತ್ ನಲ್ಲಿ ಸೋತು ಮನೆಗೆ ಹೋದ ಕೆಜಿಎಫ್ ಬಾಬು

- Advertisement -

www.karnatakatv.net :ರಾಜ್ಯದಲ್ಲಿ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ನಿರೀಕ್ಷೆಯಂತೆ ಆಡಳಿತ ರೂಡ ಬಿಜೆಪಿ ಹೆಚ್ಚಿನ ಕ್ಷೇತ್ರದಲ್ಲಿ ಗೆಲುವು ಸಾಧಿಸುವತ್ತ ಮುನ್ನಡೆಯುತ್ತಿದೆ . ಬೆಂಗಳೂರು ನಗರ ವ್ಯಾಪ್ತಿಯ ಬಿಜೆಪಿಯ ಶಾಸಕರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದ್ದ ಪರಿಷತ್ ಚುನಾವಣೆಯಲ್ಲಿ ಪಕ್ಷ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಸೋತ ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಬೆಂಗಳೂರು ಮೂಲದವರಲ್ಲದೇ ಇರುವುದು ಕಾಂಗ್ರೆಸ್ಸಿಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ.ಬಿಬಿಎಂಪಿ ವ್ಯಾಪ್ತಿಯ ಶಾಸಕರು ಕೆಜಿಎಫ್ ಬಾಬು ವಿರುದ್ಧ ಗುರುತರ ಆರೋಪವನ್ನು ಮಾಡಿದ್ದರು .ಇದರ ಬೆನ್ನಲ್ಲೇ ಅವರು ಸೋತಿರುವುದು ವಿಚಿತ್ರವಾಗಿದೆ . ನಾಮಪತ್ರ ಸಲ್ಲಿಸಲು ಐಷರಾಮಿ ಕಾರಿನಲ್ಲಿ ಬಂದಿದ್ದ ಬಾಬು, ಸೋತ ನಂತರ ಆಟೋ ಹತ್ತಿ ಮಹರಾಣಿ ಕಾಲೇಜಿನಿಂದ ತೆರಳಿದ್ದಾರೆ. ಬಿಜೆಪಿಯ ಗೋಪಿನಾಥ್ ರೆಡ್ಡಿ ಅವರಿಗೆ 1227 ಮತಗಳು ಬಂದಿದ್ದರೆ, ಕೆಜಿಎಫ್ ಬಾಬುಗೆ 830 ಮತಗಳು ಬಂದಿವೆ. ಆ ಮೂಲಕ ಬಿಜೆಪಿ ಬೆಂಗಳೂರು ನಗರ ಕ್ಷೇತ್ರವನ್ನು ಉತ್ತಮ ಅಂತರದಿ0ದ (397) ಗೆಲುವು ಸಾಧಿಸಿದೆ

- Advertisement -

Latest Posts

Don't Miss