Friday, March 14, 2025

Latest Posts

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾಣಿ ;

- Advertisement -

ಸಂಜನಾ ಗಲ್ರಾಣಿ 2020 ಮತ್ತು 2021 ರಲ್ಲಿ,ಅನಾರೋಗ್ಯ ಈಗೆ ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕಿದ್ದರು, ಈಗ ತನ್ನ ಜೀವನದಲ್ಲಿ ನಡೆದ ಕಹಿ
ಘಟನೆಗಳನ್ನು ಮರೆತು ಹೊಸ ಜೀವನ ಕಂಡುಕೊoಡಿದ್ದಾರೆ , 2022 ಕ್ಕೆ ಅವರ ಬದುಕಿನಲ್ಲಿ ಹೊಸ ಅತಿಥಿಯ ಆಗಮನವಾಗಿದೆ. ಡ್ರಗ್ಸ್ ಪ್ರಕರಣದ ಬಳಿಕ ಹೊರ ಬಂದ ಮೇಲೆ ಎಲ್ಲಿಯು ವೈಯಕ್ತಿಕ ಜೀವನದ ಬಗ್ಗೆಯು ಮಾಹಿತಿಯನ್ನು ನೀಡಿರಲಿಲ್ಲ ಆದರೆ ಈಗ ಹೊಸ ಸಿಹಿಸುದ್ದಿಯನ್ನು ನೀಡಿದ್ದಾರೆ, ಅದೇನೆಂದರೆ ಸಂಜನಾ ಈಗ ತಾಯಿಯಾಗುತ್ತಿರುವ ವಿಷಯವನ್ನು ಹಂಚಿಕೊoಡಿದ್ದಾರೆ ,
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜನಾ ನಾನೀಗ 5 ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದಾರೆ, ನನಗೆ ನನ್ನ ಬದುಕಿಗೆ ತುಂಬಾನೆ ಧನ್ಯತೆಯಿದೆ. ಇದೊಂದು ಸುಂದರ ಜರ್ನಿ. ನನಗೆ ಗಂಡು ಮಗು ಆಗಲಿದೆ ಎನ್ನುವ ಭಾವನೆ ನನಗೆ ಬರುತ್ತಿದೆ. ಎಂದು ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಜೊತೆಗೆ ಸಂಜನಾಗೆ ಮಕ್ಕಳು ಎಂದರೆ ಇಷ್ಟವಂತೆ ಈಗಾಗಿ ತಾನು ತಾಯಿಯಾಗುತ್ತಿದ್ದೇನೆ ಎನ್ನುವ ವಿಷಯ ಕೇಳಿ ಸಂತಸ ಪಟ್ಟರಂತೆ ಸಂಜನಾ ಹೇಳಿರುವ ಪ್ರಕಾರ ಸಂಜನಾ ಪೋಷಕರು ಮಕ್ಕಳನ್ನು ಯಾವಾಗ ಮಾಡಿಕೊಳ್ಳುತ್ತೀಯ ಎಂದು ಯಾವಾಗಲು ಕೇಳುತ್ತಿದ್ದರಂತೆ, ಜೊತೆಗೆ ಪ್ರೆಗ್ನೆನ್ಸಿ ಎಂದರೆ ಭಯವಿತ್ತಂತೆ ಆದರೆ ಈಗ ಭಯವಿಲ್ಲ ನನಗೀಗ 34 ವರ್ಷ ಇದು ಸರಿಯಾದ ಸಮಯ ಎಂದುಕೊoಡು ನಾನು ನನ್ನ ಗಂಡ ಮಗು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆವು” ಎಮದು ಸಂಜನಾ ಹೇಳಿದ್ದಾರೆ

- Advertisement -

Latest Posts

Don't Miss