Monday, December 23, 2024

Latest Posts

‘Rajkumar’ನ ಸಂದೇಶಕ್ಕೆ ಕರಗಿದ ಶ್ರೀಲಂಕನ್ಸ್​ ..

- Advertisement -

ಶ್ರೀಲಂಕಾ (Sri Lanka) ದ ಯೊಹಾನಿ ಹಾಡಿದ್ದ ”ಮನಿಕೆ ಮಾಗೆ ಹಿತೆ” ಹಾಡನ್ನ ನಮ್ಮ ಇಂಡಿಯನ್ಸ್ ಮೆಚ್ಚಿದಾಗ ನಾವೆಲ್ಲ ಕೊಂಡಾಡಿದ್ವಿ. ಇನ್ನು ನಮ್ಮ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneet Raj Kumar) ನಟನೆಯ ರಾಜಕುಮಾರ ಸಿನಿಮಾವನ್ನ ಶ್ರೀಲಂಕನ್ಸ್ ಮೆಚ್ಚಿ ಕೊಂಡಾಡಿದ್ದಾರೆ

ಶ್ರೀಲಂಕ.. ಅದೊಂದಥರ ನಮ್ಮೂರು ಇದ್ದಂಗೆ.. ಸಾವಿರಾರು ವರ್ಷಗಳ ಸಂಪ್ರದಾಯದ ಸಂಬಂಧ ನಮ್ಗೂ ಶ್ರೀಲಂಕಕ್ಕೂ ಇದೆ. ಕನ್ನಡ , ತಮಿಳು , ತೆಲುಗು , ಮಲಯಾಳಂ ಜೊತೆ ಸಂಸ್ಕೃತ ಮಿಕ್ಸ್ ಮಾಡಿದ್ರೆ ಶ್ರೀಲಂಕ ದೇಶದ ಭಾಷೆ ಆಗಿ ಬಿಡುತ್ತೆ. ನಮ್ಮೂರಂಗೆ ಆ ಊರಲ್ಲೂ ಸಿನಿಮಾಗಳನ್ನ ಇಷ್ಟ ಪಡ್ತಾರೆ. ಆಗೊಂದು ಈಗೊಂದು ಸಿನಿಮಾಗಳನ್ನ ಲಂಕನ್ಸ್ ಮಾಡ್ತಾರೆ. ಬೆಳ್ಳಿ ಬೊಂಬೆ ಜಾಕ್ವೇಲಿನ್ ಫರ್ನಾಂಡಿಸ್ (Jacqueline Fernandez), ಮನಿಕೆ ಮಾಗೆ ಹಿತೆ ಖ್ಯಾತಿಯ ಸಿಂಗರ್ ಸುಂದ್ರಮ್ಮ ಯೊಹಾನಿ ಡಿ ಸಿಲ್ವಾ (Sundramma Yohani De Silva) ಈಗಾಗಲೇ ಬಾಲಿವುಡ್​​ನಲ್ಲಿ ಗುರುತಿಸಿಕೊಂಡಿದ್ದಾರೆ. ಇಷ್ಟೆಲ್ಲ ನೆಂಟಸ್ತನ ಇರೋ ಶ್ರೀಲಂಕನರು ನಮ್ಮ ಭಾರತದ ನಮ್ಮ ನಾಡಿನ ಹೆಮ್ಮೆಯ ಸಿನಿಮಾ ರಾಜಕುಮಾರ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದಾರೆ.. ರಾಜಕುಮಾರ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೇಲ್​ ಪಂತಿಯಲ್ಲಿ ನಿಲ್ಲುವ ಸಿನಿಮಾ. ತಂದೆ ತಾಯಿರನ್ನ ಗೌರವಿಸಬೇಕು ಹಿರಿಯರನ್ನ ಪೂಜಿಸಬೇಕು ಅನ್ನೋ ಸಂದೇಶವನ್ನ ರಾಜಕುಮಾರ ಚಿತ್ರದ ಮೂಲಕ ಮನ ಮುಟ್ಟುವ ಹಾಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಿರಿಗನ್ನಡ ಪ್ರೇಕ್ಷಕರಿಗೆ ತಲುಪಿಸಿದ್ರು. ಇವತ್ತು ಹೊಂಬಾಳೆ ಫಿಲಂಸ್ ಇಡೀ ಭಾರತವೇ ಮೆಚ್ಚುವ ಸಿನಿಮಾ ನಿರ್ಮಾಣ ಸಂಸ್ಥೆಯಾಗಿದೆ. ಹೊಂಬಾಳೆ ಫಿಲಂಸ್​ ಅನ್ನ ಜನ ಮೆಚ್ಚುವ ಹಾಗೆ ಮಾಡಿದ್ದು ಇದೇ ರಾಜಕುಮಾರ ಸಿನಿಮಾ. ನಮ್ಮ ಕನ್ನಡದ ರಾಜಕುಮಾರ ಸಿನಿಮಾ ಎಲ್ಲಾ ಭಾಷೆಯ ಪ್ರೇಕ್ಷಕರು ಮೆಚ್ಚುವ ಜೀವ ಭಾವ ಇರೋ ಸಿನಿಮಾ. ಈಗ ಈ ಚಿತ್ರವನ್ನ ಶ್ರೀಲಂಕನ್ಸ್ ಮೆಚ್ಚಿದ್ದಾರೆ.

- Advertisement -

Latest Posts

Don't Miss