ಕೊರೊನಾ ಕಾರಣದಿಂದ ಕಾಂಗ್ರೆಸ್ ನಾಯಕರಿಗೆ ಬಾರಿ ಹಿನ್ನಡೆಯಾಗಿದೆ, ಆದರೂ ಸಹ ಕಾಂಗ್ರೆಸ್ ನಾಯಕರು ಹಠವನ್ನು ಬಿಡುತ್ತಿಲ್ಲ
ಸರ್ಕಾರ ಏನೇ ತಂತ್ರ ಮಾಡಿದರೂ ಸಹ ನಾವಿಬ್ಬರೇ ಪಾದಯಾತ್ರೆಯನ್ನು ಮಾಡ್ತೇವೆ ಎಂದು ಗುಡುಗಿದ್ದಾರೆ. ಇಂದು ಮಾಧ್ಯಮದ ಜೊತೆ ಮಾತುಕಥೆಯನ್ನು ನಡೆಸಿದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಜನವರಿ 9ರಂದು ಪಾದಯಾತ್ರೆ ನಡೆಯಲಿದೆ. ಬಿಜೆಪಿಯವರು ಒಂದನ್ನ ಅರ್ಥ ಮಾಡಿಕೊಳ್ಳಬೇಕು. ಉರಿಯೋ ಸೂರ್ಯನನ್ನ ಹಿಡಿಯೋಕೆ ಆಗಲ್ಲ. ಹರಿಯೋ ನೀರನ್ನ ತಡೆಯೋಕೆ ಆಗಲ್ಲ. ಇದನ್ನ ಅವರು ಅರ್ಥ ಮಾಡಿಕೊಂಡರೆ ಸಾಕು ಎಂದು ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಗುಡುಗಿದರು.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಿಗೂ ಡಿಕೆಶಿ ತಿರುಗೇಟು ನೀಡಿದರು. ಕುಮಾರಣ್ಣ ಬಹಳ ಮೇಧಾವಿ, ಅವರ ಬಗ್ಗೆ ನಾನು ಈಗ ಮಾತನಾಡಲ್ಲ. ಅವರ ಸಂಪುಟದಲ್ಲಿ ನಾನು ಮಂತ್ರಿಯಾಗಿದ್ದೆ. ಎಷ್ಟು ಸಲ ನಾನು ಸೆಂಟ್ರಲ್ ಮಿನಿಸ್ಟರ್ ಭೇಟಿ ಮಾಡಿದ್ದೆ, ತಮಿಳುನಾಡು ಸಚಿವರ ಭೇಟಿಗೆ ಪತ್ರ ಬರೆದಿದ್ದೆ. ಇದೆಲ್ಲವೂ ಅವರಿಗೆ ಗೊತ್ತಿದೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಇಂದು ಮಾಧ್ಯಮದ ಜೊತೆ ಮಾತುಕಥೆಯನ್ನು ನಡೆಸಿದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಈಗಾಗಿ ಸರ್ಕಾರ ಏನೇ ಕಸರತ್ತನ್ನು ನಡೆಸಿದರು.ಸಹ ನಾವು ಪಾದಯಾತ್ರೆಯನ್ನು ಮಾಡೇ ಮಾಡ್ತೇವೆ. ಒಂದು ವೇಳೆ 144 ಸೆಕ್ಷನ್ ಜಾರಿಗೊಳಿಸಿದರೆ 5 ಜನರ ಮೇಲೆ ಹೋಗುವಂತಿರುವುದಿಲ್ಲ ಹಾಗಾಗಿ ನಾವಿಬ್ಬರೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಗುಡುಗಿದರು.

