Friday, October 24, 2025

Latest Posts

ವಿಜಯ್ ದೇವರಕೊಂಡ ಜೊತೆ ಹೊಸ ವ಼ರ್ಷ ಆಚರಿಸಿದ ರಶ್ಮಿಕಾ ಮಂದಣ್ಣ

- Advertisement -

ರಶ್ಮಿಕಾ ಟಾಲಿವುಡ್ ಗೆ ತೆರಳಿದಾಗ ಮೊದಲು ಅವರಿಗೆ ಯಶಸ್ಸು ಸಿಕ್ಕಿದ್ದು ಗೀತಾ ಗೋವಿಂದo ಚಿತ್ರದಲ್ಲಿ.ಈಗಾಗಿ ಅಂದಿನಿoದ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ದೇವರಕೊಂಡ ರವರ ನಡುವೆ ಅಂದಿನಿoದ ಅವರಿಬ್ಬರ ನಡುವೆ ಉತ್ತಮವಾದ ಸ್ನೇಹ ಬೆಳೆದಿದೆ. ಈಗಾಗಿ ಹೊಸ ವರ್ಷವನ್ನು ಇಬ್ಬರೂ ಸಹ ಆಚರಣೆ ಮಾಡಿದ್ದಾರೆ.

ಆಚರಣೆಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.ರಶ್ಮಿಕಾ ಬಾಲಿವುಡ್​​ನಲ್ಲಿ ಬ್ಯುಸಿ ಆಗಿದ್ದಾರೆ. ವಿಜಯ್​ ದೇವರಕೊಂಡ ಕೂಡ ‘ಲೈಗರ್’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಅನೇಕ ಬಾರಿ ಮುಂಬೈನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಹೋಟೆಲ್​ನಲ್ಲಿ ಜತೆಯಾಗಿ ಊಟ ಮಾಡಿ, ಮರುದಿನ ಬೆಳಗ್ಗೆ ಒಟ್ಟಾಗಿ ವರ್ಕೌಟ್​ ಕೂಡ ಮಾಡಿದ್ದಿದೆ. ಈಗ ಇವರು ಗೋವಾದಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎನ್ನಲಾಗಿದೆ.ವಿಜಯ್​ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಫೋಟೋ ಒಂದನ್ನು ಪೋಸ್ಟ್​ ಮಾಡಿದ್ದಾರೆ. ಈ ಫೋಟೋದಲ್ಲಿ ಹಿಂಭಾಗದಲ್ಲಿ ತೆಂಗಿನ ಮರ, ಆಗಸ ಇದೆ. ಇದೇ ಜಾಗದಲ್ಲಿ ನಿಂತು ರಶ್ಮಿಕಾ ಮಂದಣ್ಣ ಕೂಡ ಫೋಟೋ ಹಾಕಿದ್ದಾರೆ.ಈಗಾಗಿ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೊತೆ ಅವರು ಸಹ ಹೊಸ ವರ್ಷಾಚರಣೆಯನ್ನು ಮಾಡಿದ್ದು ಸಂತಸದಿoದ ಪೋಟೋವನ್ನು ಶೇರ್ ಮಾಡಿದ್ದಾರೆ .

- Advertisement -

Latest Posts

Don't Miss