- Advertisement -
ವಿರಾಟ್ ಕೊಹ್ಲಿ ವಿಶ್ವದ ಕ್ರಿಕೆಟ್ ದಿಗ್ಗಜ ಹೀಗಿರುವಾಗ ಅವರ ಪತ್ನಿ ಅನುಷ್ಕಾ ಶರ್ಮಾ ಸಹ ಕ್ರಿಕೆಟ್ ಮೇಲೆ ಆಸಕ್ತಿಯನ್ನು ಹೊಂದಿದ್ದಾರೆ.
ಹೀಗಿರುವಾಗ ಅವರು ಕ್ರಿಕೆಟ್ ಕಥೆ ಹಂದರವುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಜನಪ್ರಿಯ ಬೌಲರ್ ಜೂಲನ್ ಗೋಸ್ವಾಮಿಯ ಜೀವನ ಸಿನಿಮಾ ಆಗುತ್ತಿದ್ದು, ಜೂಲನ್ ಗೋಸ್ವಾಮಿಯ ಪಾತ್ರದಲ್ಲಿ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ‘ಚಾಕ್ಕಡ್ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ.
ಸಿನಿಮಾದ ಟೀಸರ್ ಇಂದಷ್ಟೆ ಬಿಡುಗಡೆ ಆಗಿದ್ದು, ಭಾರತ ಕ್ರಿಕೆಟ್ ತಂಡದ ಟೀ-ಶರ್ಟ್‌ಗಳ ಮೇಲೆ ಮಹಿಳಾ ಕ್ರಿಕೆಟರ್‌ಗಳು ತಮ್ಮ ಹೆಸರು ಬರೆದುಕೊಂಡು ಆಡಲು ಇಳಿವ ಟೀಸರ್ ಗಮನ ಸೆಳೆಯುತ್ತಿದೆ. ಅನುಷ್ಕಾ ಶರ್ಮಾರ ಬೆಂಗಾಳಿ ಪ್ರಭಾವದ ಹಿಂದಿ ಸಂಭಾಷಣೆ ಸಹ ಗಮನ ಸೆಳೆದಿದೆ. ಸಿನಿಮಾ ನೆಟ್‌ಫ್ಲಿಕ್ಸ್ ಒರಿಜಿನಲ್ ಆಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ಬಿಡುಗಡೆ ಕಾಣಲಿದೆ.
- Advertisement -