Friday, July 11, 2025

Latest Posts

January 17 ರಂದು ನಡೆಯಬೇಕಿದ್ದ ಅಂಬಾಮಠ ರಥೋತ್ಸವ ರದ್ದು

- Advertisement -

ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಅತಿ ದೊಡ್ಡ ರಥೋತ್ಸವ ವೆಂದರೆ ಅದು ಅಂಬಾಮಠ ರಥೋತ್ಸವ. ಈಗ ಅಂಬಾಮಠ ರಥೋತ್ಸವವನ್ನು ರಾಯಚೂರು ಡಿಸಿ ಅವರ ಆದೇಶದ ಮೇರೆಗೆ ರದ್ದು ಮಾಡಲಾಗಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರವು ಹಲವು ಗೈಡ್ ಲೈನ್ಸ್ ಜಾರಿಗೆ ತಂದಿದೆ. ಆದ್ದರಿಂದ ಇದೇ ಜನವರಿ 17 ರಂದು ನಡೆಯಬೇಕಿದ್ದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಅಂಬಮಠ ರಥೋತ್ಸವವನ್ನು ರದ್ದು ಮಾಡಲಾಗಿದೆ. ಈ ಜಾತ್ರಾ ರಥೋತ್ಸವಕ್ಕೆ 5 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಿದ್ದರು, ಇನ್ನೂ ಮಹಾರಾಷ್ಟ್ರದ ಭಾಗದಿಂದಲೇ ಅತಿ ಹೆಚ್ಚು ಭಕ್ತರು ಆಗಮಿಸುತ್ತಿದ್ದು ಜಾತ್ರೆ ಇದಾಗಿತ್ತು. ಈ ಬಗ್ಗೆ ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡರು ಬತ್ತರಲ್ಲಿ ಮನವಿಯನ್ನು ಸಹ ಮಾಡಿದ್ದಾರೆ. ಈ ವೇಳೆ ಮಾತನಾಡಿದ ತಹಶಿಲ್ದಾರ್ ಮಂಜುನಾಥ್ ಮಾತನಾಡಿ ಕಳೆದ ವರ್ಷದಂತೆ ಈ ಬಾರಿಯೂ ಕೊರೋನ ಹೆಚ್ಚಾಗುತ್ತಿರುವ ಕಾರಣದಿಂದ ಜಾತ್ರಾ ರಥೋತ್ಸವ ಮಾಡಿದ್ದು ಎಲ್ಲಾ ಭಕ್ತಾದಿಗಳು ಭಕ್ತಿಯನ್ನು ತಮ್ಮ ಮನದಲ್ಲಿಟ್ಟುಕೊಂಡು ನಿಮ್ಮ ಮನೆಯಲ್ಲಿ ಸ್ಮರಿಸಿ ಎಂದು ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಡಿವೈಎಸ್ಪಿ ವೆಂಕಟಪ್ಪ ನಾಯಕ ಸಹ ಭಕ್ತಾದಿಗಳು ಹಾಗೂ ಸಾರ್ವಜನಿಕರಲ್ಲಿ ರಥೋತ್ಸವದ ರದ್ಧತಿಯನ್ನು ಬಗ್ಗೆ ಮನವರಿಕೆ ಮಾಡಿದ್ದಾರೆ. ಅನಿಲ್ ಕುಮಾರ್, ಕರ್ನಾಟಕ ಟಿವಿ,ರಾಯಚೂರು.

- Advertisement -

Latest Posts

Don't Miss