Punith ಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಗೌರವ

ಪುನೀತ್ ಇಲ್ಲದಿದ್ರೂ ಅವರ ಹೆಸರು ಮಾತ್ರ ಎಲ್ಲಾ ಕಡೆ ರಾರಾಜಿಸುತ್ತಿದೆ. ನಟನೆಯ ಜೊತೆಗೆ ಅವರ ಸಾಮಾಜಿಕ ಕೆಲಸಗಳನ್ನು ಮರೆಯುವಂತಿಲ್ಲ. ಈಗಾಗಿ ಭಾರತದ ಎಲ್ಲ ಕಡೆಯಲ್ಲು ಅವರಿಗೆ ಗೌರವ ಸಿಗುತ್ತಿದೆ. ವಿಶೇಷವೆಂದರೆ ತಮಿಳುನಾಡು ವಿಧಾನ ಸಭೆಯ ಮೊದಲ ಅಧಿವೇಶನದಲ್ಲಿ ಅಪ್ಪುಗೆ ಗೌರವ ಸಲ್ಲಿಸಲಾಗಿದೆ. ಇದರಲ್ಲಿ ಅಪ್ಪುವಿನ ಸಾಧನೆ ಮತ್ತು ಸಾಮಾಜಿಕ ಕಾರ್ಯಗಳನ್ನು ಸ್ಮರಿಸಲಾಗಿದೆ, ಅಪ್ಪು ನಿಧನರಾದಾಗ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪವನ್ನು ಸೂಚಿಸಿದ್ದರು, ಈಗ ವಿಧಾನಸಭೆಯಲ್ಲಿ ಗೌರವ ಸಲ್ಲಿಸುತ್ತಿರುವದು ವಿಶೇಷವಾಗಿದೆ.
ತಮಿಳುನಾಡಿನ ಅಧಿವೇಷನ ಬುಧವಾರ ಆರಂಭವಾಯಿತು. ಈ ಅಧಿವೇಶನದಲ್ಲಿ ಮೊದಲ ದಿನವೇ ಪುನೀತ್ ಬಗ್ಗೆ ಮಾತನಾಡಿದ್ದು, ಆ ವೀಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿದೆ. ಇನ್ನೂ ಅಪ್ಪು ಬಗ್ಗೆ ಎಂಕೆ ಸ್ಟಾಲಿನ್ ಮೊದಲು ಬಾರೀ ದುಖಃದಿಂದ ಪತ್ರವನ್ನು ಬರೆದಿದ್ದರು. ಈಗ ಮತ್ತೆ ಅಪ್ಪುನನ್ನು ನೆನೆದು ಗೌರವ ಸೂಚಿಸಿರುವುದು ವಿಶೇಷವಾಗಿದೆ.

About The Author