ಭಾರತದಲ್ಲಿ ಒಮಿಕ್ರಾಮ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಪ್ರಯಾಣಿಕರು ವಿದೇಶದಿಂದ ಬರುವ ಎಲ್ಲರಿಗೂ ಕಡ್ಡಾಯವಾಗಿ 7 ದಿನಗಳ ಹೋಂ ಕ್ವಾರಂಟೈನ್ ಆಗಿರಲೇಬೇಕು. ಇಲ್ಲವಾದರೆ ಅಂತರಾಷ್ಟ್ರೀಯ ಪ್ರಯಾಣ ಇರುವುದಿಲ್ಲವೆಂದು , ಈಗಾಗಿ ಕೇಂದ್ರವು ಶುಕ್ರವಾರ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿ ಜನವರಿ 11 ರಿಂದ ಜಾರಿಗೆ ಬರಲಿದೆ.ಯುಕೆ, ದಕ್ಷಣ ಆಫ್ರಿಕಾ, ಬ್ರೆಜಿಲ್ ಬೋಟ್ಸ್ವಾನಾ, ಚೀನಾ, ಘಾನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ತಾಂಜೇನೀಯಾ, ಹಾಂಗ್ಕಾoಗ್, ಇಸ್ರೇಲ್
ಕಾಂಗೋ, ಇಥಿಯೋಪಿಯಾ, ಕಜಕಿಸ್ತಾನ್, ಕೀನ್ಯಾ, ನೈಜೀರಿಯಾ ಟುನೀಷಿಯಾ ಮತ್ತು ಜಾಂಬಿಯಾ ಸೇರಿದಂತೆ ಎಲ್ಲಾ ಯುರೋಪಿಯನ್ ದೇಶಗಳು ಈಗ ಪಟ್ಟಿಯಲ್ಲಿರುವುದರಿಂದ ಅಪಾಯದಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ವಿಸ್ತರಿಸಲಾಗಿದೆ.
ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿ ;
- 1. ಎಲ್ಲಾ ಪ್ರಯಾಣಿಕರು ನಿಗದಿತ ಪ್ರಯಾಣಕ್ಕೆ ಮೊದಲು ಪ್ರಯಾಣಕ್ಕೆ ಸಂಭoದಿಸಿದ ಮಾಹಿತಿಯನ್ನು
ಆನ್ಲೈನ್ ಏರ್ ಸುವಿಧಾ ಪೋರ್ಟಲ್ನಲ್ಲಿ 14 ದಿನಗಳ ಒಳಗೆ ಸಲ್ಲಿಸಬೇಕು
2.ಪ್ರಯಾಣಿಕರು ಋಣಾತ್ಮಕ ಕೋವಿಡ್-19 ಆರ್ ಟಿ ಪಿಸಿಆರ್ ವರದಿಯನ್ನು ಅಪ್ಲೋಡ್ ಮಾಡಬೇಕು. ಪ್ರಯಾಣವನ್ನು ಕೈಗೊಳ್ಳುವ ಮೊದಲು ಪರೀಕ್ಷೆಯನ್ನು 72 ಗಂಟೆಗಳ ಒಳಗೆ ಕೋವಿಡ್ ಪರೀಕ್ಷೆಯನ್ನು ಒಳಗೊಂಡಿರಬೇಕಾಗುತ್ತದೆ.
3.ಪ್ರತಿಯೊಬ್ಬ ಪ್ರಯಾಣಿಕನಲ್ಲು ವರದಿಯ ಸತ್ಯಾಸತ್ಯತೆ ಇರಬೇಕು, ಇಲ್ಲವಾದರೆ ತಪ್ಪಿತಸ್ಥರಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ಈ
ರೀತಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿಯನ್ನು ತಿಳಿಸಿದೆ.




