- Advertisement -
ಸಾರ್ವಜನಿಕರಿಗೆ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್ ಹೆಲ್ತ್ ಮಿಷನ್ ಅನ್ನು ಜಾರಿಗೆ ತಂದಿತ್ತು. ಜೊತೆಗೆ ಸಾರ್ವಜನಿಕರು ಡಿಜಿಟಲ್ ಆರೋಗ್ಯ ಸಂಖ್ಯೆ ಪಡೆದುಕೊಳ್ಳಲು ಹಲವು ಕ್ರಮಗಳನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆಯಿದೆ.
ಈ ಬಗ್ಗೆ ನರೇಂದ್ರ ಮೋದಿಯವರು ಜನವರಿ 26 ಗಣರಾಜ್ಯತ್ಸವ ಸಮಾರಂಭದಲ್ಲಿ ಈ ಯೋಜನೆಗೆ ಅಭಾ(Arogya Bharat Health Accounts – ABHA ) ಎಂಬ ಹೆಸರು ನೀಡಲಿದ್ದಾರೆ. ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಯೋಜನೆಗೆ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಯೋಜನೆಯಲ್ಲಿ ಭಾರತೀಯರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಂಗ್ರಹಿಸಲು ಅವಕಾಶ ಸಿಗಲಿದೆ.
ಸಾಮಾನ್ಯ ಹೆಸರನ್ನು ಚಾಲ್ತಿಗೆ ತರಲು ಈ ಯೋಜನೆಯನ್ನು ಯಶಸ್ವಿಗೊಳಿಸಲು ಸರ್ಕಾರವು ಚಿಂತನೆಯನ್ನು ನಡೆಸಿದೆ.
- Advertisement -