ಮಂಗಳವಾರ ಸಿ ಎಂ ಮನೆಮುಂದೆ ಧರಣಿ ಕೂರುವೆ ; ಎಚ್ ಡಿ ರೇವಣ್ಣ

ರಾಜ್ಯದಲ್ಲಿ ಸರ್ಕಾರ ಖಾಸಗಿಯವರ ಗುಲಾಮರಂತೆ ವರ್ತಿಸುತ್ತಿದೆ. ಜೊತೆಗೆ ಈ ರಾಜ್ಯದಲ್ಲಿ ಶಿಕ್ಷಣ ಇಲಾಕೆಯು ಸಹ ಖಾಸಗಿಯವರ ಹಿಡಿತದಲ್ಲಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಎಚ್ ಡಿ ರೇವಣ್ನ ಕಿಡಿಕಾರಿದ್ದಾರೆ. ನಮ್ಮ ಜನರಿಗೆ ಅನ್ಯಾಯವಾದರೆ ಸುಮ್ಮನೆ ಕೂರುವುದಿಲ್ಲ ಕರೆದರೆ ಶಾಸಕರೂ ಸಹ ಬರುತ್ತಾರೆ, ಕೊರೋನಾ ಇದೆ ಎಂದು ಸುಮ್ಮನೆ ಕೂರುವುದಿಲ್ಲ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತೇನೆ. ಮಂಗಳವಾರ ಒಬ್ಬನೇ ಧರಣಿ ಕೂರುತ್ತೇನೆ ನನ್ನ ಪ್ರಾಣ ಹೋದರು ಹೋರಾಡುತ್ತೇನೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಳೆ ನರಸೀಪುರ ಮಹಿಳಾ ಕಾಲೇಜಿನಲ್ಲಿ ಎಂ ಎಸ್ಸಿ. ಫುಡ್ ಅಂಡ್ ನ್ಯೂರ್ಟಿಷಿಯನ್ ಕೋರ್ಸ್ ಪದವಿ ತೆರೆಯಲು ರಾಜ್ಯಸರ್ಕಾರ ಹಿಂದೇಟು ಹಾಕುತ್ತಿದೆ. ಎಂ ಎಸ್ ಸಿ ಪದವಿ ಮಂಜೂರಾತಿ ಶಿಕ್ಷಣ ಇಲಾಕೆ ಕಾರ್ಯದರ್ಶಿ ಒಪ್ಪಗೆ ನೀಡಿದ್ದಾರೆ. ಆದರೆ ಕಾಲೇಜಿನಲ್ಲಿ ಕೋರ್ಸ್ ಆರಂಭಿಸಲು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅಡ್ಡಗಾಲು ಹಾಕುತ್ತಿದ್ದಾರೆ. ಇದೆಲ್ಲದಕ್ಕೂ ನಾನು ಪ್ರತಿಭಟನೆಮಾಡಿ ಉತ್ತರಿಸುವೆ ಎಂದಿದ್ದಾರೆ.

About The Author